ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬಸ್ರೂರು ಶ್ರೀ ಮಹಾಲಸಾ ನಾರಾಯಣ ದೇವಸ್ಥಾನದ ಜೀರ್ಣೋದ್ಧಾರ ಪುನಃ ಪ್ರತಿಷ್ಠಾ ರಜತ ಮಹೋತ್ಸವವು ಡಿ.15 ರಿಂದ ಡಿ.18ರ ತನಕ ನಡೆಯಲಿದೆ.
ಡಿ.18ರಂದು ಶ್ರೀದೇವಿಗೆ ಸಹಸ್ರಾಧಿಕ ಅಷ್ಟೋತ್ತರ ಶತ ಸ್ವರ್ಣ ನಾಣ್ಯ ಸಹಿತ ರಜತ ಕುಂಭಾಭಿಷೇಕವು ಶ್ರೀ ಕಾಶೀ ಮಠಾಧೀಶ ಶೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದರ ಅಮೃತ ಹಸ್ತಗಳಿಂದ ನೆರವೇರಲಿದೆ.
ಈ ಕುರಿತು ಗುರುವರ್ಯರು ತಮ್ಮ ಚೇಂಪಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಳ ಮೊಕ್ಕಾಮಿನಲ್ಲಿ ನ.18ರಂದು ಆಮಂತ್ರಣ ಪತ್ರಿಕೆಯನ್ನು ವಿದ್ಯುಕ್ತವಾಗಿ ಬಿಡುಗಡೆಗೊಳಿಸಿ ಮಹೋತ್ಸವಕ್ಕೆ ಚಾಲನೆಯೊಂದಿಗೆ ಶುಭ ಹಾರೈಸಿದ್ದಾರೆ.
ಈ ಸಂದರ್ಭದಲ್ಲಿ ಬಸ್ರೂರು ದೇವಾಲಯದ ಧರ್ಮದರ್ಶಿ ಮಂಡಳಿಯ ಟಿ. ನಾರಾಯಣ ಎಂ. ಪೈ ಮಣಿಪಾಲ, ದಿನಕರ ಭಗವಂತ ಶೆಣೈ ಕುಂದಾಪುರ, ಕೆ. ಗೋಕುಲ್ ದಾಸ್ ಪೈ ಮಣಿಪಾಲ, ಎಸ್. ಗೋಪಾಲಕೃಷ್ಣ ಪೈ ಕುಂದಾಪುರ, ಡಾ. ಎಂ. ವಿಶ್ವನಾಥ ಪೈ ಉಡುಪಿ, ಎಸ್. ಪ್ರಭಾಕರ್ ಪೈ, ಬಾರ್ಕೂರು, ವೇ| ಚೇಂಪಿ ಶ್ರೀಕಾಂತ್ ಭಟ್, ಚೇಂಪಿ ದೇವಳದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.
ಕಾರ್ಯಕರ್ತರ ನಿಸ್ಪ್ರಹ ಸೇವೆಯೇ ದೇವ ಕೇಂದ್ರದ ಯಶಸ್ಸಿಗೆ ಸುಭದ್ರವಾದ ಪಂಚಾಂಗ: ಸರ್ವ ಆರಾಧಕರೂ ಭಕ್ತಿ ಭಾವದಿಂದ ಒಪ್ಪಿಸುವ ಸೇವೆಯಿಂದ ಸಂಕಲ್ಪಿತ ಕಾರ್ಯವು ಯಶ: ಪೂರ್ಣವಾಗುತ್ತದೆ- ಶ್ರೀ ಸಂಯಮೀಂದ್ರ ಶ್ರೀಪಾದರು.
ಶ್ರೀ ಮಹಾಲಸೆಯ ಚೌಕಿಯ ಅಭಯವಾಕ್ಯದಂತೆ ಈ ಅನನ್ಯ ಅಭಿಷೇಕದ ಆಚರಣೆ: ಹಿರಿಯ ಯತಿಗಳಾದ ವೃಂದಾವನಸ್ಥ ಶ್ರೀ ಸುಧೀಂದ್ರ ತೀರ್ಥ ಶ್ರೀ ಪಾದಂಗಳವರಿಂದ ಜೀರ್ಣೋದ್ಧಾರ ಪುನಃ ಪ್ರತಿಷ್ಠೆಯಾದ ಬಳಿಕ ದೇವಾಲಯವು ಬಹುಮುಖವಾಗಿ ಬೆಳೆಯುತ್ತಲಿದೆ.

