Site icon Kundapra.com ಕುಂದಾಪ್ರ ಡಾಟ್ ಕಾಂ

ಹಳಗೇರಿ ಶ್ರೀ ಕಾಲಭೈರವ ದೇವಸ್ಥಾನ: ನ.23ರಂದು ಶ್ರೀ ಕಾಲಭೈರವಾಷ್ಠಮಿ, ಕಾರ್ತಿಕ ದೀಪೋತ್ಸವ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ತಾಲೂಕಿನ ಹಳಗೇರಿಯಶ್ರೀ ಕ್ಷೇತ್ರ ತೆಂಕಬೆಟ್ಟು ಶ್ರೀ ಕಾಲಭೈರವ ದೇವಸ್ಥಾನದಲ್ಲಿ ಶ್ರೀ ಕಾಲಭೈರವಾಷ್ಠಮಿ, ಕಾರ್ತಿಕ ದೀಪೋತ್ಸವವು ನ.23 ಶನಿವಾರದಂದು ಜರುಗಲಿದೆ.

ಬೆಳಿಗ್ಗೆ 7.30ರಿಂದ ಶ್ರೀ ಕಾಲಭೈರವಾಷ್ಠಮಿ ಅಂಗವಾಗಿ 108 ಸೀಯಾಳ ಸಹಿತ ವಿಶೇಷ ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, ದೇವರ ಉತ್ಸವ, ರೂಟ್ ಪೂಜೆ, ಅನ್ನಸಂತರ್ಪಣೆ ಹಾಗೂ ಸಂಜೆ 6ಗಂಟೆಯಿಂದ ದೇವಸ್ಥಾನದಲ್ಲಿ ದೇವರ ಉತ್ಸವ, ಭಜನಾ-ಕಾರ್ಯಕ್ರಮ ಹಾಗೂ ದೀಪೋತ್ಸವವು ನಡೆಯಲಿದೆ. ಈ ವೇಳೆ ಭಕ್ತಾಭಿಮಾನಿಗಳಿಗೆ ದೀಪ ಬೆಳಗಿಸುವ ಅವಕಾಶವಿದೆ ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version