Site icon Kundapra.com ಕುಂದಾಪ್ರ ಡಾಟ್ ಕಾಂ

ಮೂರ್ಗೋಳ್ಳಿಹಕ್ಲು ಶ್ರೀ ನಂದಿಕೇಶ್ವರ ದೈವಸ್ಥಾನ: ನ.23ರಂದು ನಂದಿಕೇಶ್ವರ ಸಭಾಭವನ ಉದ್ಘಾಟನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ತಾಲೂಕಿನ ಬಿಜೂರು ಮೂರ್ಗೋಳ್ಳಿಹಕ್ಲು ಶ್ರೀ ನಂದಿಕೇಶ್ವರ ಹಾಗೂ ಸಪರಿವಾರ ದೇವಸ್ಥಾನದಲ್ಲಿ ಭಕ್ತರ ಸೇವಾ ಸಂಕಲ್ಪದಂತೆ ನೂತನವಾಗಿ ನಿರ್ಮಾಣವಾಗಿರುವ ಶ್ರೀ ನಂದಿಕೇಶ್ವರ ಸಭಾಭವನ ಇದರ ಉದ್ಘಾಟನಾ ಸಮಾರಂಭವು ನ.23ರಂದು ಬೆಳಗ್ಗೆ 9.30ಕ್ಕೆ ಜರುಗಲಿದೆ.

ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ, 2.30ರಿಂದ ರಿಥಮ್ ನೃತ್ಯ ಮತ್ತು ಕಲಾ ಶಾಲೆ ಬೈಂದೂರು ಇವರಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ.

ಈ ಸಮಾರಂಭದ ಉದ್ಘಾಟನೆಯನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ವೈ. ರಾಘವೇಂದ್ರ ಅವರು ನೆರವೆರಿಸಲಿದ್ದಾರೆ ಹಾಗೂ ಅಧ್ಯಕ್ಷತೆಯನ್ನು ಬಿಜೂರು ಮೂರ್ಗೋಳ್ಳಿಹಕ್ಲು ಶ್ರೀ ನಂದಿಕೇಶ್ವರ ದೇವಸ್ಥಾನದ ಅಧ್ಯಕ್ಷರಾದ ಶ್ರೀನಿವಾಸ ಕೆ.ದೇವಾಡಿಗ ಅವರು ವಹಿಸಲಿದ್ದಾರೆ.

ದಿವ್ಯ ಉಪಸ್ಥಿತಿಯಾಗಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಇರಲಿದ್ದಾರೆ. ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಾಸ್ಥಾನದ ಆಡಳಿತ ಮೊಕ್ತೇಸರರಾದ ಬಿ. ಅಪ್ಪಣ್ಣ ಹೆಗ್ಡೆ ಅವರು ಶುಭಸಂಶನೆಗೈಯಲಿದ್ದಾರೆ.

ಗೌರವ ಉಪಸ್ಥಿತಿಯಾಗಿ ಉಡುಪಿ ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷರಾದ ರಾಜು ಪೂಜಾರಿ, ಉಡುಪಿ ಜಿಲ್ಲೆ ಭಾ.ಜ.ಪ ಕಾರ್ಯದರ್ಶಿಯಾದ ಪ್ರಿಯದರ್ಶಿನಿ ಕಮಲೇಶ್ ಬೆಸ್ಕೊರು, ಬಿಜೂರು ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಚೆಣ್ಣಮ್ಮ, ಸಮೃದ್ಧ ಬೈಂದೂರು ಜನ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಎಸ್. ಸುರೇಶ ಶೆಟ್ಟಿ ಉಪ್ಪುಂದ ವೇದಿಕೆಯಲ್ಲಿ ಉಪಸ್ಥಿತಿ ಇರುವರು.

ಮುಖ್ಯ ಅತಿಥಿಗಳಾಗಿ ಬಿಜೂರು ಲಕ್ಷ್ಮಣ ದೇವಾಡಿಗ ಕಿರಿನಮನೆ, ರಾಘವೇಂದ್ರ ಶ್ಯಾನುಭಾಗ್ ಬಿಜೂರು, ಬಿಜೂರು ಕಾತ್ಯಾಯಿನಿ ರೈಸ್‌ಮಿಲ್  ಮಾಲಿಕರಾದ ಸಂತೋಷ ಶ್ಯಾನುಬಾಗ್, ಸವಿತಾ ದಿನೇಶ ಗಾಣಿಗ, ಉಪ್ಪುಂದ ವರಲಕ್ಷ್ಮೀ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷರಾದ ಡಾ. ಗೋವಿಂದಬಾಬು ಪೂಜಾರಿ, ಶ್ರೀರಾಮ್ ಹೊಟೇಲ್ ಮತ್ತು ಶ್ರೀರಾಮ್ ಬೇಕರಿ ಮಾಲಿಕರಾದ  ಅಣ್ಣಪ್ಪ ದೇವಾಡಿಗ, ನಾಯ್ಕನಕಟ್ಟೆ ರಾಧಾಕೃಷ್ಣ ಕಲಾಮಂದಿರದ ಮಾಲಿಕರಾದ ಚಂದ್ರ ಎನ್. ದೇವಾಡಿಗ, ಮೈಸೂರು ಉದ್ಯಮಿ ಗುರುರಾಜ್ ಪಂಜು ಪೂಜಾರಿ ಬಿಜೂರು, ಬೈಂದೂರು ಶ್ರೀ ದುರ್ಗಾ ಅರ್ಥಮೂವರ್ಸ್ ಮಾಲಿಕರಾದ ವೆಂಕಟರಮಣ ಶೇರುಗಾರ್, ಮುಂಬೈ ಉದ್ಯಮಿಯಾದ ಭಾಸ್ಕರ್ ಮೊಗವೀರ ದಾಸೋಡಿ, ಉದ್ಯಮಿ ಸತೀಶ್ ಕೊಠಾರಿ ನಾಯ್ಕನಕಟ್ಟೆ, ಕರುನಾಡ ಸಿರಿ ಮುಂಬಯಿ ಅಧ್ಯಕ್ಷರಾದ ಬಾಲಚಂದ್ರ ದೇವಾಡಿಗ,  ದೈವಸ್ಥಾನದ ಉಪಾಧ್ಯಕ್ಷ ಸುರೇಶ ದೇವಾಡಿಗ ಬೆಟ್ಟಿನಮನೆ, ಉಡುಪಿ ಚೆನ್ನಪ್ಪ ಮೊಯ್ಲಿ ಮೊದಲಾದವರು ಇರಲಿದ್ದಾರೆ.

Exit mobile version