ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ ಇವರು ನಡೆಸುವ ಸಿಎಸ್‌ಇಇಟಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜನತಾ ಪದವಿಪೂರ್ವ ಕಾಲೇಜಿನ 9 ವಿದ್ಯಾರ್ಥಿಗಳು ಅದ್ವಿತೀಯ ಸಾಧನೆ ಮಾಡಿರುತ್ತಾರೆ.ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಪರವಾಗಿ ಅಭಿನಂದಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಪ್ರಾಂಶುಪಾಲರಾದ ಗಣೇಶ ಮೊಗವೀರ ಅವರು ಮಾತನಾಡಿ, ‘ವಿಜ್ಞಾನ ವಿಭಾಗದಂತೆ ವಾಣಿಜ್ಯ ವಿಭಾಗವು ಬಹಳಷ್ಟು ಪ್ರಮುಖವಾದದ್ದು,ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಸಿಎ/ಸಿಎಸ್ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಭವಿಶಾಲಿ ಉಪನ್ಯಾಸಕರಿಂದ ತರಬೇತಿ ನೀಡಲಾಗುತ್ತಿದ್ದು ಅವೆಲ್ಲದರ ಫಲಶ್ರುತಿಯೇ ಈ ಫಲಿತಾಂಶ ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಶುಭ ಹಾರೈಸಿದರು’.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಉತ್ತಮ ವಾಗ್ಮಿಗಳಾಗಿರುವ ದಾಮೋದರ ಶರ್ಮಾ ಅವರು ಮಾತನಾಡಿ,’ಕಲಿತ ಸಂಸ್ಥೆಯ ಮೇಲೆ ನಿಮಗಿರುವ ಅಭಿಮಾನ, ಗುರುಗಳ ಆಶೀರ್ವಾದ ಸದಾ ನಿಮ್ಮೊಂದಿಗಿದ್ದಾಗ ನೀವು ಅಂದುಕೊಂಡಿದ್ದು ಈಡೇರಲು ಸಾಧ್ಯವಿದೆ.ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಿ,ಉತ್ತಮ ವ್ಯಕ್ತಿತ್ವ ನಿಮ್ಮದಾಗಲಿ,ಜೀವನದಲ್ಲಿ ಕಷ್ಟ ಪಟ್ಟಷ್ಟು ಸುಖ ನಿಮ್ಮದಾಗುತ್ತದೆ ಎಂದು ಶುಭ ಹಾರೈಸಿದರು’.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪ-ಪ್ರಾಂಶುಪಾಲರಾದ ರಮೇಶ ಪೂಜಾರಿ, ಬೋಧಕ/ಬೋಧಕೇತರ ವೃಂದದವರು ಸಾಧಕ ವಿದ್ಯಾರ್ಥಿಗಳು,ವಿದ್ಯಾರ್ಥಿ ಪೋಷಕರು ಉಪಸ್ಥಿತರಿದ್ದರು.
ಸಾಧಕ ವಿದ್ಯಾರ್ಥಿಗಳಾದ,ಧೀರಜ್ ಶೇಟ್, ಸುಜನ್, ಅರ್ಚನ್ ಕುಮಾರ್, ಮೈತ್ರಿ, ಅಕ್ಷೋಭ್ಯ, ವಿಶ್ಮಿತಾ, ಸ್ಪಂದನ್, ಶಾಶ್ವತ್, ಕೌಶಿಕ್ ಈ ವಿದ್ಯಾರ್ಥಿಗಳೊಂದಿಗೆ ವಿದ್ಯಾರ್ಥಿ ಪೋಷಕರನ್ನು ಗೌರವಿಸಿ ಅಭಿನಂದಿಸಲಾಯಿತು.
ಉಪನ್ಯಾಸಕಿ ಉಷಾ ಸ್ವಾಗತಿಸಿ, ಉಪನ್ಯಾಸಕ ಪ್ರತಾಪ್ ಸಾಧಕ ವಿದ್ಯಾರ್ಥಿಗಳ ಯಾದಿಯನ್ನು ವಾಚಿಸಿ, ಉಪನ್ಯಾಸಕ ಉದಯ ನಾಯ್ಕ ಕಾರ್ಯಕ್ರಮ ನಿರೂಪಿಸಿ ಉಪನ್ಯಾಸಕ ಗುರುರಾಜ್ ವಂದಿಸಿದರು.