ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗ ಜಂಟಿ ಆಶ್ರಯದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ದೇಹದಾರ್ಢ್ಯ ಸ್ಪರ್ಧೆ 2024-25 ಆಳ್ವಾಸ್ ಕಾಲೇಜು ಪ್ರಥಮ ಎಸ್ ಡಿ ಎಂ ಸಿ ಬಿ ಎಂ ಮಂಗಳೂರು ದ್ವಿತೀಯ ಮತ್ತು ಸೇಕ್ರೆಡ್ ಹಾರ್ಟ್ ಮಡಂತ್ಯಾರು ತೃತೀಯ. ಆಳ್ವಾಸ್ ಕಾಲೇಜಿನ ಕಿಶನ್ ಅವರು “ಮಿಸ್ಟರ್ ಮಂಗಳೂರು ವಿಶ್ವವಿದ್ಯಾಲಯ 2024-25” ಮತ್ತು ಪಿಪಿಸಿ ಕಾಲೇಜಿನ ಚಿರಾಗ್ ಮೋಸ್ಟ್ ಮಾಸ್ಕುಲರ್ ಪ್ರಶಸ್ತಿ ಪಡೆದರು.
ಭಂಡಾರ್ಕರ್ಸ್ ಕಾಲೇಜು ಮಾಜಿ ಅಂತರ್ ವಿಶ್ವವಿದ್ಯಾಲಯ ಮಟ್ಟದ ಕುಸ್ತಿ ಪಟು ಮತ್ತು ಬಾಡಿ ಬಿಲ್ಡಿಂಗ್ ಚಾಂಪಿಯನ್ ಮತ್ತು ಉದ್ಯಮಿ ಕೃಷ್ಣಮೂರ್ತಿ ಶೆಟ್ಟಿ ಅವರು ಉದ್ಘಾಟಿಸಿ ದೇಹದಾರ್ಢ್ಯ ಪಟುಗಳು ತಮ್ಮ ದೇಹದಾರ್ಡ್ಯತೆ ಮತ್ತು ಆರೋಗ್ಯವನ್ನು ಸದಾ ಕಾಪಾಡಿಕೊಳ್ಳುವಂತೆ ಹೇಳಿ ಶುಭ ಹಾರೈಸಿದರು.
ಮಂಗಳೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಬಾ. ಸಂತೋಷ್ ಜೆರಾಲ್ಡ್ ಡಿಸೋಜಾ ಅವರು ಸ್ಪರ್ಧಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರ ಪ್ರಾಂಶುಪಾಲೆ ನಿಶಾ ಎಂ. ಅವರು ವಹಿಸಿದ್ದರು.
ಡಾ. ಹರಿದಾಸ ಕುಳೂರ್ ಸ್ಪರ್ಧೆಗೆ ವಿಶ್ವವಿದ್ಯಾಲಯದಿಂದ ವೀಕ್ಷಕರಾಗಿ ಉಪಸ್ಥಿತರಿದ್ದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಮ್.ಗೊಂಡ ಮತ್ತು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸತ್ಯ ನಾರಾಯಣ ಅವರು ಉಪಸ್ಥಿತರಿದ್ದರು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿಕಾಲೇಜಿನ ವಿಶ್ವಸ್ತರಾದ ರಾಜೇಂದ್ರ ತೋಳಾರ್ ಮತ್ತು ಪಿಡಬ್ಲೂಡಿ ಗುತ್ತಿಗೆದಾರ ರಂಜಿತ್ ಕುಮಾರ್ ಶೆಟ್ಟಿ ಅವರು ಬಹುಮಾನ ವಿತರಿಸಿದರು.
ದೈಹಿಕ ಶಿಕ್ಷಣ ನಿರ್ದೇಶಕ ಶಂಕರನಾರಾಯಣ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಸುಮ ಮತ್ತು ಸ್ಪೂರ್ತಿ ಕಾರ್ಯಕ್ರಮ ನಿರೂಪಿಸಿದರು. ಮನಸ್ವಿ ವಂದಿಸಿದರು.