Kundapra.com ಕುಂದಾಪ್ರ ಡಾಟ್ ಕಾಂ

ಸೋಲು ಸ್ವೀಕೃತಿಯ ದೃಷ್ಟಿ ಗೆಲುವಿನ ವೃಷ್ಟಿಯಾಗಲಿದೆ: ಜೇಸಿ ಸದಾನಂದ ನಾವಡ

ಕುಂದಾಪುರ: ವೃತ್ತಿ-ಪ್ರವೃತ್ತಿಗಳಲ್ಲಿ ಸೋಲ-ಗೆಲುವನ್ನು ಸಮಾನವಾಗಿ ಸ್ವೀಕರಿಸಬಲ್ಲ ಮನೋಭಾವದ ಭವಿಷ್ಯದ ಬೆಳವಣಿಗೆಯೇ ಪೂರಕವಾಗುವುದಲ್ಲದೇ ಬದುಕಿನಲ್ಲಿ ಗೆಲ್ಲುವ ಸಾಮರ್ಥ್ಯವನ್ನು ಸೃಷ್ಟಿಸುತ್ತದೆ ಎಂದು ಅಂತರಾಷ್ಟ್ರೀಯ ತರಬೇತಿದಾರ ಸದಾನಂದ ನಾವಡ ಹೇಳಿದರು. ಅವರು ಕುಂದಾಪುರದ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ಕ್ರೀಡೋತ್ಸವದಲ್ಲಿ ಕ್ರೀಡಾಜ್ಯೋತಿಯನ್ನು ಬೆಳಗಿಸಿ ಮಾತನಾಡಿದರು.

ಪಠ್ಯ ವಿಷಯಗಳಿಂದ ಹೊರತಾದ ಸೃಜನಶೀಲ ಪ್ರವೃತ್ವವನ್ನು ರೂಡಿಸಿಕೊಂಡ ಯಶಸ್ವೀ ವ್ಯಕ್ತಿಗಳ ಬದುಕು ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕಿದೆ ಎಂದರು. ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ರಾಧಾಕೃಷ್ಣ ಶೆಣೈ, ಕೋಶಾಧಿಕಾರಿ ಕೋಡಿ ಶ್ರೀನಿವಾಸ ಶೆಣೈ, ಆಡಳಿತಾಧಿಕಾರಿ ಪಿ. ಶ್ರೀಪತಿ ಹೇರ್ಳೆ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗಣೇಶ ನಾಯಕ್, ಪ್ರೌಢಶಾಲಾ ವಿಭಾಗದ ಪ್ರಾಂಶುಪಾಲರಾದ ರೂಪಾ ಶೆಣೈ, ಪ್ರಾಥಮಿಕ ಶಾಲಾ ಮುಖ್ಯಸ್ಥರಾದ ಜಯಶೀಲಾ ನಾಯಕ್ ಉಪಸ್ಥಿತರಿದ್ದರು. ಕ್ಯಾರೋಲಿನ್ ಸ್ವಾಗತಿಸಿ, ನೀಲೇಶ್ ಪ್ರಭು ಅಭ್ಯಾಗತರನ್ನು ಪರಿಚಯಿಸಿದರು. ಸಹನಾ ಭಟ್ ವಂದಿಸಿದರು. ನಿಶ್ಮಾ ಕಾರ್ಯಕ್ರಮ ನಿರ್ವಹಿಸಿದರು.

Exit mobile version