ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕಾವಾಡಿ ಗ್ರಾಮದ ನಿವಾಸಿ ಸತೀಶ (48) ಎಂಬುವರು ಕಾಲಿಗೆ ಬಾಟಲಿ ತಾಗಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.
ಅವರು ಹಾಲಾಡಿ ಶ್ರೀ ಗುರುರಾಘವೇಂದ್ರ ಹೊಟೇಲ್‌ನಲ್ಲಿ 12 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದರು. ಭಾನುವಾರದಂದು ಕೆಲಸದ ವೇಳೆ ಸೋಡಾ ಬಾಟಲಿಗಳ ಕ್ರೇಟ್ ಅನ್ನು ಎತ್ತಿ ಇಡುವಾಗ ಒಂದು ಬಾಟಲಿ ನೆಲಕ್ಕೆ ಬಿದ್ದು ಒಡೆದು, ಬಲ ಕಾಲಿಗೆ ಚೂರುತಾಗಿ ರಕ್ತಸ್ರಾವ ಉಂಟಾಗಿತ್ತು. ಕೂಡಲೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸಂಜೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

