Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಡಾ. ಎಚ್. ಶಾಂತಾರಾಮ್ ಅವರಿಗೆ ಭಾವಾಭಿನಂದನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಅವಿಭಜಿತ ಕುಂದಾಪುರ ತಾಲೂಕಿನಲ್ಲಿ ಪದವಿ ಕಾಲೇಜು ಇಲ್ಲದ ಸಂದರ್ಭ ಜನ್ಮ ತಳೆದ ಭಂಡಾರ್‌ಕಾರ್ಸ್ ಕಾಲೇಜು ಇಂದು ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಲು ಕಾರಣ ಡಾ.ಎಚ್.ಶಾಂತಾರಾಮ್ ಮಣಿಪಾಲ ಅಕಾಡೆಮಿ ಆಡಳಿತಾಧಿಕಾರಿಯಾಗಿ ಕಾಲೇಜನ್ನು ಕಟ್ಟಿದ ಪರಿ ಅದ್ವಿತೀಯ. ಅವರೊಬ್ಬ ನಿಜಾರ್ಥದ ಸ್ವಪ್ನಶಿಲ್ಪಿ ಎಂದು ಕುಂದಾಪುರ ಶಾಸಕ ಕಿರಣ್‌ ಕುಮಾರ ಕೊಡ್ಗಿ ಹೇಳಿದರು.

ಸೋಮವಾರ ಇಲ್ಲಿನ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಜರುಗಿದ ಡಾ. ಎಚ್. ಶಾಂತಾರಾಮ್ ಭಾವಾಭಿನಂದನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಹಿರಿಯ ನ್ಯಾಯವಾದಿ ಎ.ಎಸ್‍.ಎನ್‍. ಹೆಬ್ಬಾರ್‍ ಅಭಿನಂದನಾ ನುಡಿಗಳನ್ನಾಡಿದರು. ಮಣಿಪಾಲ ಅಕಾಡೆಮಿ ರಿಜಿಸ್ಟ್ರಾರ್ ಡಾ. ಎಚ್‍.ಎಸ್‍. ಬಲ್ಲಾಳ್‍ ಅಧ‍್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಕಾಲೇಜು, ಹಳೆ ವಿದ್ಯಾರ್ಥಿಗಳ ವಿಶ್ವಸ್ಥ ಮಂಡಳಿ, ರಕ್ಷಕ-ಶಿಕ್ಷಕ ಸಂಘ, ಸಮಸ್ತ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಡಾ.ಎಚ್.ಶಾಂತಾರಾಮ್ ಮತ್ತು ವಿಜಯಲಕ್ಷ್ಮೀ ದಂಪತಿಯನ್ನು ಸನ್ಮಾನಿಸಲಾಯಿತು.

ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಮುಖರು, ಸಂಘ ಸಂಸ್ಥೆಗಳ ಪ್ರಮುಖರು ಗೌರವ ಸಲ್ಲಿಸಿದರು. ಮಾಜಿ ಸಚಿವ ಅಭಯಚಂದ್ರ ಜೈನ್, ವರದರಾಯ ಪೈ, ದೇವದಾಸ ಕಾಮತ್, ರಾಜೇಂದ್ರ ತೋಳಾರ್, ಡಾ. ರಂಜಿತ್ ಕುಮಾರ ಶೆಟ್ಟಿ ಪ್ರಕಾಶ್ ಟಿ. ಸೋನ್ಸ್, ಜಯಕರ ಶೆಟ್ಟಿ ಅಭಿನಂದನ್ ಶೆಟ್ಟಿ ಪ್ರಜ್ಞೆಶ್ ಪ್ರಭು, ಪ್ರಿನ್ಸಿಪಾಲ್ ಡಾ. ಜಿ.ಎಂ.ಗೊಂಡ ಉಪಸ್ಥಿತರಿದ್ದರು.

ಪ್ರಿನ್ಸಿಪಾಲ್ ಡಾ. ಶುಭಕರ ಆಚಾರಿ ಸ್ವಾಗತಿಸಿದರು. ಶಾಂತಾರಾಮ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಉಪನ್ಯಾಸಕಿ ಹರ್ಷಿತಾ ಕಾರ್ಯಕ್ರಮ ನಿರ್ವಹಿಸಿದರು. ಸಹ ಪ್ರಾಧ್ಯಾಪಕ ಸತ್ಯನಾರಾಯಣ ವಂದಿಸಿದರು.

Exit mobile version