Kundapra.com ಕುಂದಾಪ್ರ ಡಾಟ್ ಕಾಂ

ಕಿರಿಮಂಜೇಶ್ವರದಲ್ಲಿ ಬುಲೆಟ್ ಬೈಕ್ ಡಿಕ್ಕಿ: ಇಬ್ಬರು ಗಂಭೀರ

ಬೈಂದೂರು: ಬುಲೆಟ್ ಬೈಕ್ ಹಾಗೂ ಯಮಾಹಾ ಎಫ್‌ಝೆಡ್ ಬೈಕ್‌ಗಳೆರಡು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಎರಡೂ ಬೈಕುಗಳ ಸವಾರರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕಿರಿಮಂಜೇಶ್ವರ ಬಸ್ ನಿಲ್ದಾಣ ಸಮೀಪ ಸಂಜೆ  ವೇಳೆ ನಡೆದಿದೆ. ಬುಲೆಟ್ ಸವಾರ ಶಿರೂರಿನ ಗೋಪಾಲ ಮೇಸ್ತ(58) ಹಾಗೂ ಎಫ್‌ಝೆಡ್ ಬೈಕ್ ಸವಾರ ಕಿರಿಮಂಜೇಶ್ವರದ ಕುದ್ರುಕೋಡು ನಿವಾಸಿ ರಿತೇಶ್ ಶೆಟ್ಟಿ(27) ಎಂಬುವರೇ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರು.

ಗೋಪಾಲ ಮೇಸ್ತ ತನ್ನ ಬುಲೆಟ್ ನಲ್ಲಿ ಬೈಂದೂರು ಕಡೆಗೆ ಪ್ರಯಾಣಿಸುತ್ತಿದ್ದಾಗ ಮನೆ ಕಡೆಯಿಂದ ಪೇಟೆಗೆ ಬರುತ್ತಿದ್ದ ನಿತಿನ್ ಶೆಟ್ಟಿ ಬೈಕ್ ಪರಸ್ಪರ ಮುಖಾಮುಖಿ ಡಿಕ್ಕಿಯಾಗಿದೆ ಎನ್ನಲಾಗಿದೆ. ಗೋಪಾಲ ಮೇಸ್ತ ಎಂಬುವರ ದವಡೆ ಒಡೆದು ಹೋಗಿದ್ದು, ಕಿಬ್ಬೊಟ್ಟೆಗೆ ಗಂಭೀರ ಗಾಯಗಳಾಗಿದ್ದು ತೀವ್ರ ರಕ್ತಸ್ರಾವವಾಗಿದ್ದು, ನಿತಿನ್ ಶೆಟ್ಟಿ ತಲೆಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಅವರೀರ್ವರನ್ನು ಕುಂದಾಪುರದ ಚಿನ್ಮಯೀ ಆಸ್ಪತ್ರೆಗೆ ಕರೆತರಲಾಗಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಣಿಪಾಲಕ್ಕೆ ಸಾಗಿಸಲಾಗಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಂಭೀರ ಗಾಯಗೊಂಡಿದ್ದ ಗೋಪಾಲ ಮೇಸ್ತ ಅಪಘಾತದಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟ ಕುರಿತು ಕುಂದಾಪ್ರ ಡಾಟ್ ಕಾಂ ಗೆ ಮಾಹಿತಿ ಲಭ್ಯವಾಗಿದೆ. (updated)

news kirimanjeshwara accident

Exit mobile version