ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗಂಗೊಳ್ಳಿಯ ತೌಹೀದ್ ಸಮೂಹ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಕ್ರೀಡಾ ಕೂಟ ಶಾಲಾ ಮೈದಾನದಲ್ಲಿ ಗುರುವಾರ ಜರಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ಇಬ್ರಾಹಿಂ ಚೌಗುಲೆ ವಹಿಸಿದ್ದರು.
ಮುಖ್ಯ ಅತಿಥಿ ಶಿರೂರು ತೌಹೀದ್ ಪಬ್ಲಿಕ್ ಸ್ಕೂಲ್‌ನ ಮುಖ್ಯೋಪಾಧ್ಯಾಯ ಶಬ್ಬೀರ್ ಅಹ್ಮದ್ ದಫೆದಾರ್ ಶುಭಾಶಂಸನೆಗೈದರು. ಅನಿವಾಸಿ ಭಾರತೀಯರಾದ ಅಬ್ದುಲ್ ಸತ್ತಾರ್ ಮಡಿಕಲ್, ಜಾವೀದ್ ಎಂ.ಎಚ್., ಅಬ್ದುಲ್ ಹಮೀದ್ ಮೌಲಾನ, ತೌಹೀದ್ ವಿಶ್ವಸ್ಥ ಮಂಡಳಿಯ ಸದಸ್ಯರಾದ ಇಕ್ಬಾಲ್ ಪಿ.ಎಂ., ವ್ಯವಸ್ಥಾಪಕ ತಾಹೀರ್ ಹಸನ್ ಹಾಗೂ ತೌಹೀದ್ ಮಹಿಳಾ ಕಾಲೇಜುಗಳ ಪ್ರಾಂಶುಪಾಲರಾದ ಆಶಾ ನಾಯ್ಕ, ಸಮೀನ ಬುಖಾರಿ, ತೌಹೀದ್ ಆಂಗ್ಲ ಮಾದ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸಭಾ ಬಾನು ಉಪಸ್ಥಿತರಿದ್ದರು.
ಶಬ್ಬೀರ್ ಅಹ್ಮದ್ ಪ್ರಾಸ್ತಾವಿಕ ಮಾತನಾಡಿದರು. ಸಾರಿಯ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಮದಾ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಇಕ್ರಾ ವಂದಿಸಿದರು.

