Kundapra.com ಕುಂದಾಪ್ರ ಡಾಟ್ ಕಾಂ

ಗೋವಾ ಬಂಟರ ಸಂಘದ ವತಿಯಿಂದ ರಜತ ಸಂಭ್ರಮದ ಲಾಂಛನ ಬಿಡುಗಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಗೋವಾ ಬಂಟರ ಸಂಘದ ವತಿಯಿಂದ  ಜ. 19ರಂದು ನಡೆಯಲಿರುವ ರಜತ ಸಂಭ್ರಮ ಕಾರ್ಯಕ್ರಮದ ಲಾಂಛನ ಬಿಡುಗಡೆ ಡಿ. 01 ರಂದು ನಡೆದ ಸಂಘದ ವಾರ್ಷಿಕ ಕ್ರೀಡಾಕೂಟದಲ್ಲಿ ಸಂಘದ ಅಧ್ಯಕ್ಷರಾದ ಕಾವಡಿ ಸದಾಶಿವ ಶೆಟ್ಟಿ ಅನಾವರಣ ಮಾಡಿದರು. 

ಗೋವಾ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಸುನಿಲ್ ಶೆಟ್ಟಿ ಬೆಳ್ಳಂಪಳ್ಳಿ, ಕೋಶಾಧಿಕಾರಿ ಪ್ರಶಾಂತ್ ಶೆಟ್ಟಿ, ಸಂಘದ ಉಪಾಧ್ಯಕ್ಷರಾದ ವಿಜಯೇಂದ್ರ ಶೆಟ್ಟಿ ಕಬ್ಯಾಡಿ, ಜಗದೀಶ್ ಶೆಟ್ಟಿ ಪಳ್ಳಿ, ಜೊತೆ ಕಾರ್ಯದರ್ಶಿ ರಾಘವ ಶೆಟ್ಟಿ ಕೊಡ್ಲಾಡಿ, ನಿಕಟ ಪೂರ್ವ ಅಧ್ಯಕ್ಷರಾದ ಶಶಿಧರ ನಾಯ್ಕ್ , ಸಂಘದ ಮಾಜಿ ಉಪಾಧ್ಯಕ್ಷರಾದ ಸುಬ್ರಮಣ್ಯ ಶೆಟ್ಟಿ, ಶಶಿಧರ ರೈ, ಮಾಜಿ ಕಾರ್ಯದರ್ಶಿ ಗಣೇಶ ಶೆಟ್ಟಿ ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Exit mobile version