ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದ ವಾರ್ಷಿಕ ಕ್ರೀಡಾಕೂಟವು ಗಾಂಧಿ ಮೈದಾನದಲ್ಲಿ ಅದ್ಧೂರಿಯಾಗಿ ನೆರವೇರಿತು.
ಸಿವಿಲ್ ಇಂಜಿನಿಯರ್, ದೊಂಬೆ ಕಾಂಪ್ಲೆಕ್ಸ್ ಮಾಲಕರಾದ ರವೀಂದ್ರ ದೊಂಬೆ ಕ್ರೀಡಾಧ್ವಜವನ್ನು ಆರೋಹಣ ಮಾಡಿ ಮಾತನಾಡಿ, ಕ್ರೀಡಾ ಮನೋಭಾವದಿಂದ ಆಡಿ ತನು ಮನಗಟ್ಟಿ ಮಾಡಿಕೊಳ್ಳುವಂತೆ ಹೇಳಿದರು.
ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅಜೇಯ್ ಭಂಡಾರ್ಕರ ಕ್ರೀಡಾ ಜ್ಯೋತಿ ಬೆಳಗಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್. ಡಿ. ಎಂ. ಸಿ. ಅಧ್ಯಕ್ಷರಾದ ವೆಂಕಟ್ರಮಣ ದೇವಾಡಿಗ ಹೇನ್ ಬೇರ್ ವಹಿಸಿದ್ದರು. ಅತಿಥಿಗಳಾಗಿದ್ದ ಪಟ್ಟಣ ಪಂಚಾಯತ್ ನ ನಾಮ ನಿರ್ದೇಶಿತ ಸದಸ್ಯರಾದ ಸದಾಶಿವ ಡಿ. ಪಡುವರಿ ಹಾಗೂ ನಾಗರಾಜ ಗಾಣಿಗ, ಜೆಸಿಐ ಬೈಂದೂರು ಮಾಜಿ ಅಧ್ಯಕ್ಷ ನರೇಂದ್ರ ಶೇಟ್ ಶುಭ ಹಾರೈಸಿದರು.
ಉಪಪ್ರಾಂಶುಪಾಲರು ಧನ್ಯವಾದ ಗೈದರು. ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಭಾಕರ್ ಹಾಗೂ ಪುಷ್ಪಾ ಟಿಟಿ ಅವರೊಂದಿಗೆ ಎಲ್ಲಾ ಶಿಕ್ಷಕರೂ ಸಹಕರಿಸಿದರು.

