Site icon Kundapra.com ಕುಂದಾಪ್ರ ಡಾಟ್ ಕಾಂ

ಕೋಟೇಶ್ವರ: ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಲಾರಿ ಪಲ್ಟಿ- ಚಾಲಕ ಪಾರು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಕೋಟೇಶ್ವರ ರಾಷ್ಟ್ರಿಯ ಹೆದ್ದಾರಿ 66ರ ಸಹನಾ ಹಾಲ್ ಎದುರುಗಡೆ ಪ್ಲಾಸ್ಟಿಕ್ ತಯಾರಿಸುವ ಕಚ್ಚಾ ವಸ್ತು ಸಾಗಿಸುತ್ತಿದ್ದ ಲಾರಿವೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿಹೊಡೆದು ಪಲ್ಟಿಯಾದ ಘಟನೆ ಡಿ.10ರ ಮಂಗಳವಾರದಂದು ಮುಂಜಾನೆ ನಡೆದಿದೆ.

ಮಂಗಳೂರುನಿಂದ ಸೋಲಾಪುರಕ್ಕೆ ಪ್ಲಾಸ್ಟಿಕ್ ತಯಾರಿಸುವ ಕಚ್ಚಾ ವಸ್ತು ಸಾಗಿಸುತ್ತಿದ್ದ ಲಾರಿವು ಬೆಳಗಿನ ಜಾವ ಚಾಲಕ ನಿದ್ರೆ ಮಂಪರಿನಲ್ಲಿ ಡಿವೈಡರ್‌ಗೆ ಡಿಕ್ಕಿಹೊಡೆದು ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ.

ಅಪಘಾತದಲ್ಲಿ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದು ಲಾರಿ ಜಖಂಗೊಂಡಿದೆ. ಕುಂದಾಪುರ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದಾರೆ.

Exit mobile version