Kundapra.com ಕುಂದಾಪ್ರ ಡಾಟ್ ಕಾಂ

ಸಂದೀಪನ್ ವಿದ್ಯಾರ್ಥಿಗಳ ಕವ್ವಾಲಿಹಾಡು ರಾಜ್ಯ ಮಟ್ಟಕ್ಕೆ ಆಯ್ಕೆ

ಬೈಂದೂರು: ಉರ್ದು ಭಾಷೆಯ ಜನಪ್ರಿಯ ಸಂಗೀತ ಪ್ರಕಾರದಲ್ಲೊಂದಾದ ಕವ್ವಾಲಿ ಹಾಡುವಿಕೆಯಲ್ಲಿ ಜಿಲ್ಲಾ ಮಟ್ಟದ ಸಮೂಹ ಗಾನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಪಡೆದ ನಾಗೂರಿನ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ನಾಗೂರಿನಲ್ಲಿ ಜರುಗಿದ ೫ವಲಯಗಳ ಉಡುಪಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಪ್ರೌಢಶಾಲಾ ವಿಭಾಗದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ಅಜಿತ್, ಅನುಷಾ ಪೈ, ವಿಜೇತಾ ಪ್ರಭು ಗಾಯನದಲ್ಲಿ, ಗೌರವ್ ಕಾಮತ್ ತಬಲಾ, ಹಾಗೂ ಅಜಿತ್ ಭಂಡಾರ್ಕಾರ್ ಹಾರ‍್ಮೋನಿಯಂನಲ್ಲಿದ್ದರು. ವಾದನ ಗಾಯನ ಹಾಗೂ ಅಭಿನಯದಲ್ಲಿ ಒಂದಾಗಿ ಉತ್ತಮವಾದ ಪ್ರತಿಭೆ ಪ್ರದರ್ಶಿಸಿ ಪ್ರಥಮ ಸ್ಥಾನಕ್ಕೆ ಆಯ್ಕೆಯಾಗಿದ್ದರು.

ಈ ತಂಡದ ಎಲ್ಲಾ ವಿದ್ಯಾರ್ಥಿಗಳ ಮಾತೃ ಭಾಷೆ ಕೊಂಕಣಿಯಾಗಿದ್ದರೂ ಉರ್ದುವಿನಲ್ಲಿ ಸ್ಪರ್ಧಿಸಿ ಗೆದ್ದರುವುದು ವಿಶೇಷವಾಗಿದೆ. 10 ನಿಮಿಷ ಅವಧಿಯ ಈ ಸುಧೀರ್ಘ ಸ್ಪರ್ದೆಗೆ ಕವ್ವಾಲಿ ಹಾಡಿನ ಹೊಂದಾಣಿಕೆ ಅಭಿನಯ ಮತ್ತು ವಿನ್ಯಾಸವನ್ನು ಶಿಕ್ಷಕಿ ಶ್ರೀಮತಿ ವರ್ಷಾ ಆರ್ ನಾಯಕ್ ಹಾಗೂ ಶಿಕ್ಷಕ ಶ್ರೀನಿವಾಸ ಪ್ರಭು ಸಂಗೀತ ನಿರ್ದೇಶನ ನೀಡಿದ್ದರು.

Exit mobile version