Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದು ವಂಚನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕೋಟೇಶ್ವರ ಗ್ರಾಮದ ದಿನೇಶ್, ಹರೀಶ್ ಅವರು ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಿಂದ 10 ಲಕ್ಷ ರೂ. ಸಾಲ ಪಡೆದಿದ್ದು, ಅದಕ್ಕಾಗಿ ನಕಲಿ ದಾಖಲೆ ಸೃಷ್ಟಿಸಿ, ವಂಚಿಸಿರುವುದಾಗಿ ಸೊಸೈಟಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮೇಬಲ್‍ ಡಿ’ ಅಲ್ಮೇಡಾ ದೂರು ನೀಡಿದ್ದಾರೆ.

ಆರೋಪಿಗಳಾದ ದಿನೇಶ್ ಹಾಗೂ ಹರೀಶ್ ಅವರು ಸಾಲಕ್ಕೆ ಗೋಪಾಡಿ ಗ್ರಾಮದ 0.05 ಎಕ್ರೆ ಆಸ್ತಿಯನ್ನು ಅಡಮಾನ ಇರಿಸಿದ್ದು, ಇದನ್ನು ಕೃಷಿಯೇತರ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಲಾಗಿತ್ತು. ಗೋಪಾಡಿ ಗ್ರಾ.ಪಂ. ಪಿಡಿಒ ಗಣೇಶ ಹಾಗೂ ಕಾರ್ಯದರ್ಶಿ ಹರಿಶ್ಚಂದ್ರ ಈ ಸ್ವತ್ತು ಸಂಖ್ಯೆ ಮರೆಮಾಚಿ, ಎರಡು ನಕಲಿ ಈ ಸ್ವತ್ತು ಸಂಖ್ಯೆ ಸೃಷ್ಟಿಸಿ ಬೇನಾಮಿ ಕ್ರಯ ಪತ್ರ ಮಾಡಿ ಸೊಸೈಟಿಗೆ ಮೋಸ ಮಾಡಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಕುಂದಾಪುರ ಪೋಲೀಸ್‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version