Kundapra.com ಕುಂದಾಪ್ರ ಡಾಟ್ ಕಾಂ

ಡಿ.19ರಿಂದ 3 ದಿನಗಳ ಕಾಲ ʼವರ್ಷ ವೈಭವʼ – ರಂಗ, ಯಕ್ಷೋತ್ಸವ 2024

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಯುಸ್ಕೋರ್ಡ್ ಟ್ರಸ್ಟ್ ರಿ. ಬೈಂದೂರು ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ವರ್ಷವೈಭವ  – 3 ದಿನಗಳ ರಂಗ ಯಕ್ಷೋತ್ಸವ 2024 ಕಾರ್ಯಕ್ರಮ ಇಲ್ಲಿನ ಶಾರದಾ ವೇದಿಕೆಯಲ್ಲಿ ಡಿ.19ರಿಂದ 21ರ ತನಕ ಪ್ರತಿದಿನ ಸಂಜೆ 6.30ಕ್ಕೆ ನಡೆಯಲಿದೆ.

ಡಿ. 19ರಂದು ಬೈಂದೂರು ಶಾಸಕರಾದ ಗುರುರಾಜ ಗಂಟಿಹೊಳೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು  ಬೈಂದೂರು ಯುಸ್ಕೋರ್ಡ್ ಟ್ರಸ್ಟ್ ರಿ. ಕಾರ್ಯದರ್ಶಿ ಕೃಷ್ಣಮೂರ್ತಿ ಉಡುಪ ಕಬ್ಸೆ ಅವರು ವಹಿಸಲಿದ್ದಾರೆ. ಉಡುಪಿಯ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ ಕುಂದಾಪುರ ಅವರು ಸೇರಿದಂತೆ ವಿವಿಧ ಅತಿಥಿ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

ಅಂದು ಬಳ್ಳಾರಿ ಧಾತ್ರಿ ರಂಗಸಂಸ್ಥೆ ಕಲಾವಿದೆ ಸುಮಂಗಲಾ ಅವರಿಗೆ ಸನ್ಮಾನಿಸಲಾಗುತ್ತದೆ. ಬಳಿಕ ಡಾ.ಎಂ, ಬೈರೇಗೌಡ ರಚಿಸಿ ನವೀನ್ ಭೂಮಿ ನಿರ್ದೆಶಿಸಿದ ಧಾತ್ರಿ ರಂಗಸಂಸ್ಥೆ ಸಿರಿಗೇರಿ ಬಳ್ಳಾರಿ ಪ್ರಸ್ತುತಿಯಲ್ಲಿ ʼಸರಸತಿಯಾಗಲೊಲ್ಲೆʼ ನಾಟಕ ಪ್ರದರ್ಶನಗೊಳ್ಳಲಿದೆ.

ಡಿ.20 ರಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಂದೂರು ಅಡಿಟರ್ ಜತೀಂದ್ರ ಮರವಂತೆ ಅವರು ವಹಿಸಲಿದ್ದಾರೆ. ಬೈಂದೂರು ಪುರಸಭೆ ಮುಖ್ಯಧಿಕಾರಿಗಳಾದ ಅಜೇಯ ಭಂಡರಕಾರ್ ಅವರು ಶುಭಸಂಶನೆ ಮಾಡಲಾಗಿದೆ.

ಆ ಬಳಿಕ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ರಚಿಸಿ,  ಜಗದೀಶ್ ಆರ್. ಜಾಣಿ ನಿರ್ದೆಶಿಸಿದ ಧಾತ್ರಿ ರಂಗಸಂಸ್ಥೆ ಸಿರಿಗೇರಿ ಬಳ್ಳಾರಿ ಪ್ರಸ್ತುತಿಯ ಮೋಳಿಗೆ ಮಾರಯ್ಯ ನಾಟಕ ಪ್ರದರ್ಶನಗೊಳ್ಳಲಿದೆ.

ಡಿ.21ರಂದು ಸಮಾರೋಪ ಅಧ್ಯಕ್ಷತೆಯನ್ನು ಬೈಂದೂರು ಪಟ್ಟಣ ಪಂಚಾಯತ್ ನಾಮನಿರ್ದೇಶಿತ ಸದಸ್ಯರಾದ ಸದಾಶಿವ ಡಿ. ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಉಡುಪಿ ಕನ್ನಡ ಮತ್ತು ಸಂಸ್ಕೃ ತಿ ಇಲಾಖೆಯ ಸಹಾಯಕ ನಿರ್ದೆಶಕರಾದ ಪೂರ್ಣಿಮಾ ಸೇರಿದಂತೆ ಇನ್ನತರರು ಭಾಗವಹಿಸಲಿದ್ದಾರೆ.

ಅಂದು ಯಕ್ಷಗಾನ ಭಾಗವತ ಮರವಂತೆ ದೇವರಾಜ್ ದಾಸ್ ಅವರನ್ನು ಸನ್ಮಾನಿಸಲಾಗುತ್ತದೆ. ಬಳಿಕ ಸುರಭಿ ರಿ. ಬೈಂದೂರು ಇಲ್ಲಿಯ ಬಾಲಕಲಾವಿದರಿಂದ ಪ್ರಶಾಂತ ಮಯ್ಯ ದಾರಿಮಕ್ಕಿ ನಿರ್ದೆಶನದಲ್ಲಿ ʼಅಭಿಮನ್ಯು ಕಾಳಗʼ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

Exit mobile version