Kundapra.com ಕುಂದಾಪ್ರ ಡಾಟ್ ಕಾಂ

ಸಬ್ ಜೂನಿಯರ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಝಾರಾಳಿಗೆ ಕಂಚು ಹಾಗೂ ಸಾನಿಧ್ಯಾಳಿಗೆ ಬೆಳ್ಳಿ ಪದಕ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇತ್ತೀಚಿಗೆ ದೆಹಲಿಯ ಕಿಯೋದಲ್ಲಿ ನಡೆದ ಅಖಿಲ ಭಾರತ ಸಬ್ ಜೂನಿಯರ್ ಕರಾಟೆ ಚಾಂಪಿಯನ್‌ಶಿಪ್‌ 2024ರಲ್ಲಿ 13  ವಯೋಮಿತಿಯ 52 ಕೆಜಿ ಕುಮಿಟೆ ವಿಭಾಗದಲ್ಲಿ ವಕ್ವಾಡಿ  ಗುರುಕುಲ ಪಬ್ಲಿಕ್ ಸ್ಕೂಲ್ಕ್‌ನ ಎಂಟನೇ ತರಗತಿಯ ವಿದ್ಯಾರ್ಥಿನಿ ಝಾರಾ ಕಂಚಿನ ಪದಕ ಪಡೆದಿದ್ದಾಳೆ.

ಸಬ್ ಜೂನಿಯರ್ 11  ವಯೋಮಿತಿಯ 45 ಕೆಜಿ ಕುಮಿಟೆ ವಿಭಾಗದಲ್ಲಿ ಏಳನೇ ತರಗತಿಯ ವಿದ್ಯಾರ್ಥಿನಿ ಸಾನಿಧ್ಯಾ ಸಂತೋಷ್ ನಾಯ್ಕ್‌ ಬೆಳ್ಳಿ ಪದಕ ಪಡೆದಿದ್ದಾಳೆ.

ಈ ಕ್ರೀಡಾಕೂಟದಲ್ಲಿ ಬೇರೆ ಬೇರೆ ರಾಜ್ಯದ ಕ್ರೀಡಾಳುಗಳು ಭಾಗವಹಿಸಿದ್ದರು.

ಅವರಿಬ್ಫರೂ ಕುಂದಾಪುರದ ಕೆ.ಡಿ.ಎಫ್. ಕರಾಟೆ ಶಾಲೆಯ ಕಿಯೋಷಿ ಕಿರಣ್ ಕುಂದಾಪುರ ಮತ್ತು ಶಿಹಾನ್ ಸಂದೀಪ್ ವಿ.ಕೆ. ಅವರಿಂದ ತರಬೇತಿ ಪಡೆಯುತ್ತಿದ್ದಾರೆ .

ವಿದ್ಯಾರ್ಥಿನಿಯರ ಈ ಸಾಧನೆಯನ್ನು ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಪ್ರಶಂಸಿಸಿದ್ದಾರೆ.

Exit mobile version