ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲದ ಕಚೇರಿಯಲ್ಲಿ 11ನೇ ಬೂತಿನ ಅಧ್ಯಕ್ಷರು ಮತ್ತು ಸಮಿತಿ ಸದಸ್ಯರ ಆಯ್ಕೆ ನಡೆಯಿತು.
ಬೂತಿನ ಅಧ್ಯಕ್ಷರಾಗಿ ರತ್ನಾಕರ್ ಕುಂದಾಪುರ, ಕಾರ್ಯದರ್ಶಿಯಾಗಿ ನವೀನ್ ಕುಮಾರ್ ಕೆ. ಮತ್ತು ಸಮಿತಿಗೆ ಒಟ್ಟು 12 ಜನರನ್ನು ಆಯ್ಕೆ ಮಾಡಲಾಯಿತು.
ಶಕ್ತಿಕೇಂದ್ರ ಸಹಯೋಗಿ ರಾಜೇಶ್ ಕಡ್ಗಿಮನೆ ಚುನಾವಣೆ ನಡೆಸಿಕೊಟ್ಟು ಹೊಸ ಸಮಿತಿಗೆ ಶುಭ ಕೋರಿದರು.
ಪ್ರಾಸ್ತಾವಿಕ ಮಾತನಾಡಿದ ದಕ್ಷಿಣ ಕನ್ನಡ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಚುನಾವಣಾ ಅಧಿಕಾರಿ ರಾಜೇಶ್ ಕಾವೇರಿ ಬೂತ್ ಸಮಿತಿಯ ಕಾರ್ಯವಿಸ್ತಾರ ಮತ್ತು ಜವಾಬ್ದಾರಿಗಳ ಬಗ್ಗೆ ತಿಳಿಸಿದರು.
ರತ್ನಾಕರ ಕುಂದಾಪುರ ಸ್ವಾಗತಿಸಿ, ನೂತನ ಕಾರ್ಯದರ್ಶಿ ನವೀನ್ ಕುಮಾರ್ ಕೆ. ವಂದನಾರ್ಪಣೆಯನ್ನು ಮಾಡಿದರು.