Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: 10 ದಿನಗಳ ಕಸೂತಿ ವಿನ್ಯಾಸ ತರಬೇತಿ ಸಂಪನ್ನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ:
ರೋಟರಿ ಕ್ಲಬ್ ಗಂಗೊಳ್ಳಿ ಇದರ ವತಿಯಿಂದ ಆಯೋಜಿಸಲಾದ 10 ದಿನಗಳ ಕಸೂತಿ ವಿನ್ಯಾಸ ತರಬೇತಿಯ ಸಮಾರೋಪವು ಗಂಗೊಳ್ಳಿಯ ಸ.ವಿ. ಪದವಿ ಪೂರ್ವ ಕಾಲೇಜಿನ ಲೈಬ್ರೆರಿ ಹಾಲಿನಲ್ಲಿ ನಡೆಯಿತು.

ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷೆ ಚಂದ್ರಕಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಬೈಂದೂರು ಕ್ಲಬ್‌ನ ಅಧ್ಯಕ್ಷೆ ಗುಲಾಬಿ ಪೂಜಾರ್ತಿ ಅವರು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ತರಬೇತಿ ಶಿಕ್ಷಕಿ ರಮ್ಯ, ಆಶ್ರಯ ಹೊಲಿಗೆ ತರಬೇತಿ ಸಂಸ್ಥೆಯ ಶಿಕ್ಷಕಿ ಶಾಂತಿ ಖಾರ್ವಿ ಹಾಗೂ ರೋಟರಿ ಸದಸ್ಯರು ಉಪಸ್ಥಿತರಿದ್ದರು.

Exit mobile version