Kundapra.com ಕುಂದಾಪ್ರ ಡಾಟ್ ಕಾಂ

ಜ.03ರಂದು ಕುಂದಾಪುರ ನೆಹರೂ ಮೈದಾನದಲ್ಲಿ ಯಕ್ಷರಾತ್ರಿ – ದಶಯಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ
: ನೆಹರೂ ಮೈದಾನದಲ್ಲಿ ಯಕ್ಷರಾತ್ರಿ ಸಂಯೋಜನೆಯಲ್ಲಿ ಜ.03 ರಂದು ಯಕ್ಷರಾತ್ರಿ ದಶಯಾನ – 2025 ಯಕ್ಷಗಾನ ಪ್ರದರ್ಶನ ನಡೆಯಲಿದೆ. ಸತತ 9 ವರ್ಷಗಳಿಂದ ಯಕ್ಷಗಾನ ಪ್ರದರ್ಶನದ ಜೊತೆಗೆ ಗೌರವ ಪುರಸ್ಕಾರ, ಅಶಕ್ತರಿಗೆ ನೆರವು ಹೀಗೆ ಹಲವಾರು ಯೋಜನೆಗಳನ್ನು ಯಕ್ಷರಾತ್ರಿಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.

ಈ ವರ್ಷ ಯಕ್ಷರಾತ್ರಿಯ ಗೌರವ ಪುರಸ್ಕಾರವಾಗಿ ಯಕ್ಷಗಾನ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ಪಡೆದ ಡಾ. ದೀಪಕ್ ಕುಮಾರ್ ಶೆಟ್ಟಿ ಬಾರ್ಕೂರು, ಯಕ್ಷರಾತ್ರಿ ಕಲಾಗೌರವವಾಗಿ ಮಂದಾರ್ತಿ ಮೇಳದ ಹಿರಿಯ ಹಾಸ್ಯಗಾರರಾದ ಕಮಲಶಿಲೆ ಮಹಾಬಲ ದೇವಾಡಿಗ, ಪೆರ್ಡೂರು  ಮೇಳದ ಪ್ರಧಾನ ಹಾಸ್ಯಗಾರರಾದ ಕಮಲಶಿಲೆ ರವೀಂದ್ರ ದೇವಾಡಿಗ, ಯುವ ಕಲಾವಿದ ಸೌಕೂರು ಮೇಳದ ಹುಟ್ಟೂರ ಗೌರವಿತರಾದ ಸುಬ್ರಹ್ಮಣ್ಯ ಗಾಣಿಗ ಕೋಣಿ ಹಾಗೂ  ಯಕ್ಷರಾತ್ರಿ ಯಶೋಗಾತೆ ಪುರಸ್ಕಾರವನ್ನು ಸಮಾಜ ಸೇವಕರಾದ ಪದ್ಮಮ್ಮ ಹೊದ್ರೊಳ್ಳಿ ಅವರಿಗೆ ನೀಡಲಾಗುತ್ತಿದೆ.

ಶ್ರೀ ಪೆರ್ಡೂರು ಮೇಳದವರ ಈ ವರ್ಷದ ಎರಡನೇ ಪ್ರಸಂಗ ಶ್ವೇತಾ ಬೊಳ್ಳಂಬಳ್ಳಿ ವಿರಚಿತ ಪ್ರಸಾದ ಕುಮಾರ್ ಮೊಗೆಬೆಟ್ಟು ಪದ್ಯ ರಚನೆಯ ಕ್ಷೀರಾ ಸಮುದ್ರ ಯಕ್ಷಕಾಶಿ ಹೊಸ ವರ್ಷದ ಮೊಟ್ಟಮೊದಲ ಪ್ರಸಂಗವಾಗಿ ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕ ಗಜೇಂದ್ರ ಆಚಾರ್ ಕೋಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version