ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ವಂಡ್ಸೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕೋತ್ಸವದ ಕಾರ್ಯಕ್ರಮಕ್ಕೆ ಶಾಲಾ ಧ್ವಜಾರೋಹ್ಹಣದ ಮೂಲಕ ಚಾಲನೆ ನೀಡಲಾಯಿತು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಡಾ. ಪೂರ್ಣಿಮಾ ಟಿ. ಧ್ವಜಾರೋಹಣ ನೆರವೇರಿಸಿದರು.
ವಂಡ್ಸೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗೋವರ್ಧನ್ ಜೋಗಿ ಕಾರ್ಯಕ್ರಮ ಉದ್ದೇಸಿಸಿ ಮಾತನಾಡಿ, ಮನೆ ಹಾಗೂ ಶಾಲೆ ವಿಶ್ವದ ಅತ್ಯಂತ ಸುಂದರ ಸ್ಥಳಗಳು. ಜಾತಿ ಧರ್ಮ ಭೇದ ವಿಲ್ಲದ ಸ್ಥಳವೆಂದರೆ ಅದು ಶಾಲೆ. ಶಾಲೆ ವಾರ್ಷಿಕೋತ್ಸವವೆಂದರೆ ಮಕ್ಕಳ ಹಬ್ಬ ಎಂದರು.
ಗ್ರಾಮ ಪಂಚಾಯತ್ ವಂಡ್ಸೆಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಉದಯಕುಮಾರ್ ಶೆಟ್ಟಿ, ಹಳೇವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂದೇಶ ಶೆಟ್ಟಿ, ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ನಾಗರಾಜ ಶೆಟ್ಟಿ, ಶ್ರೀಧರ್ ರಾವ್, ವಿದ್ಯಾರ್ಥಿ ಆರಾಧ್ಯ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತತೆಯರು ಉಪಸ್ಥಿತರಿದ್ದರು.
ಪ್ರಭಾರ ಮುಖ್ಯ್ಯಪಾಧ್ಯಯರಾದ ಸದಾಶಿವ ಸ್ವಾಗತಿಸಿದರು. ಸಹಶಿಕ್ಷಕ ಸೋಮಯ್ಯ ಜನ್ನು ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ರಾಜು ಎನ್. ಧ್ವಜಾರೋಹಣ ಪ್ರಕ್ರಿಯೆ ನಿರ್ವಹಿಸಿದರು.

