Kundapra.com ಕುಂದಾಪ್ರ ಡಾಟ್ ಕಾಂ

ರಾಷ್ಟ್ರೀಯ ಆದ್ಯತಾ ಸಂಸ್ಥೆಯು ವೈದ್ಯಕೀಯ ಸೂಪರ್ ಸ್ಪೆಷಾಲಿಟಿ ಪರೀಕ್ಷೆಯಲ್ಲಿ ಡಾ. ಕೌಶಿಕ್ ತೇರ್ಗಡೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ರಾಷ್ಟ್ರೀಯ ಆದ್ಯತಾ ಸಂಸ್ಥೆಯು ವೈದ್ಯಕೀಯ ಸೂಪರ್ ಸ್ಪೆಷಾಲಿಟಿ ಆಯ್ಕೆಗಾಗಿ ನಡೆಸಿದ ಪರೀಕ್ಷೆಯಲ್ಲಿ ಡಾ. ಕೌಶಿಕ್ ಡಿ. ಎಸ್ ಕ್ರಿಟಿಕಲ್ ಕೇರ್ ಮೆಡಿಸಿನ್‌ನಲ್ಲಿ ಮೂರು ವರ್ಷಗಳ ಪದವಿಗಾಗಿ ಪ್ರಥಮ ಸ್ಥಾನದಲ್ಲಿ ಆಯ್ಕೆಯಾಗಿರುತ್ತಾರೆ.

ಈ ಹಿಂದೆ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಭುವನೇಶ್ವರದಲ್ಲಿ ಎಂಡಿ ಪದವಿ ಮುಗಿಸಿ ನವದೆಹಲಿಯ ಏಮ್ಸ್‌ನಲ್ಲಿ ಸೇವೆ ಸಲ್ಲಿಸಿದ್ದರು. ಈಗ ಸಂಜಯ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆ ಲಕ್ನೋದಲ್ಲಿ ಸ್ನಾತಕೋತ್ತರ ಲಕ್ನೋದಲ್ಲಿ ಕ್ರಿಟಿಕಲ್ ಕೇರ್ ಮೆಡಿಸಿನ್ ಡಿಪ್ಲೊಮಾ ಕೋರ್ಸ್‌ಗೆ ಆಯ್ಕೆಪಟ್ಟಿಯಲ್ಲಿ ಪ್ರಥಮವಾಗಿ ಆಯ್ಕೆಯಾಗಿದ್ದರು.

‌ಇವರು ನಿವೃತ್ತ ಉಪನಿರ್ದೇಶಕರಾದ ದಿವಾಕರ ಶೆಟ್ಟಿಯವರ ಪುತ್ರರಾಗಿದ್ದು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡುಗಿಳಿಯಾರಿನ ಹಳೆ ವಿದ್ಯಾರ್ಥಿ.

Exit mobile version