Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಯುವ ಬಂಟರ ಸಂಘದಿಂದ 90ರ ಸಂಭ್ರಮದಲ್ಲಿರುವ ಬಿ. ಅಪ್ಪಣ್ಣ ಹೆಗ್ಡೆ ಅವರಿಗೆ ಗೌರವಾರ್ಪಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಯುವ ಬಂಟರ ಸಂಘದಿಂದ 90 ರ ಸಂಭ್ರಮದಲ್ಲಿರುವ ನಾಡಿನ ಗಣ್ಯಮಾನ್ಯರಾದ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರನ್ನು ಅವರ ಸ್ವಗ್ರಹದಲ್ಲಿ ಸಂಘದ ಗೌರವಾಧ್ಯಕ್ಷರಾದ ವತ್ಸಲ ದಯಾನಂದ ಶೆಟ್ಟಿ , ಸಂಘದ ಪೋಷಕರಾದ ವಿಜಯ ಶೆಟ್ಟಿ ಸಟ್ಟಾಡಿ ಮತ್ತು ಸಂಘದ ಸ್ಥಾಪಕಾಧ್ಯಕ್ಷರು ಮತ್ತು ದಶಮ ಸಂಭ್ರಮದ ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಅವರು ಸನ್ಮಾನಿಸಿ ಗೌರವಿಸಿದರು.

 ಸಂಘದ ಅಧ್ಯಕ್ಷರಾದ ನಿತೀಶ್ ಶೆಟ್ಟಿ ಬಸ್ರೂರು ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಸಂಘದ  ಮಾಜಿ ಅಧ್ಯಕ್ಷರಾದ ಸುಕೇಶ ಶೆಟ್ಟಿ ಹೊಸ್ಮಠ, ಸುನಿಲ್ ಶೆಟ್ಟಿ ಹೇರಿಕುದ್ರು, ಕೋಶಾಧಿಕಾರಿ ಭರತ ಶೆಟ್ಟಿ ಜಾಂಬೂರು, ಉಪಾಧ್ಯಕ್ಷರಾದ ಉದಯ್ ಕುಮಾರ್ ಶೆಟ್ಟಿ ಮಚ್ಚಟ್ಟು, ಸುರೇಶ ಶೆಟ್ಟಿ ಕಾರಿಬೈಲ್ ಜೆಡ್ಡು , ಸುಕುಮಾರ ಶೆಟ್ಟಿ ಹೇರಿಕುದ್ರು, ದಿನಕರ ಶೆಟ್ಟಿ ಹರ್ಕಾಡಿ, ಸುರೇಂದ್ರ ಶೆಟ್ಟಿ ಗುಳ್ವಾಡಿ, ರೋಷನ್ ಶೆಟ್ಟಿ ಮುಂತಾದವರು  ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷರಾದ ಡಾ. ಚೇತನ ಕುಮಾರ್ ಶೆಟ್ಟಿ ಕೊವಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದಶಮ ಸಂಭ್ರಮದ ಕೋಶಾಧಿಕಾರಿ ಅಕ್ಷಯ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Exit mobile version