Kundapra.com ಕುಂದಾಪ್ರ ಡಾಟ್ ಕಾಂ

ಕೊಡೇರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಮತ್ತು ಹಳೆ ವಿದ್ಯಾರ್ಥಿಗಳ ವಾರ್ಷಿಕೋತ್ಸವ

Oplus_0

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಮತ್ತು ಹಳೆ ವಿದ್ಯಾರ್ಥಿಗಳ ವಾರ್ಷಿಕೋತ್ಸವ ಸಮಾರಂಭವು ಶನಿವಾರದಂದು ಕೊಡೇರಿ ಶಾಲಾ ಆವರಣದಲ್ಲಿ ಜರಗಿತು.

ಅಂದು ಪೂರ್ವಾಹ್ನ ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೇಖರ ಖಾರ್ವಿ ಧ್ವಜಾರೋಹಣಗೈದು ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸುರೇಶ ಎಚ್. ಖಾರ್ವಿ ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು ಮತ್ತು ಗ್ರಾಮ ಪಂಚಾಯತ್ ಸದಸ್ಯರಾದ ಆನಂದ ಪೂಜಾರಿ ಕೊಡೇರಿ, ಹಿರಿಯರು ಕೊಡುಗೈದಾನಿಗಳಾದ ಕೆ. ವಾಸುದೇವ ಕಾರಂತ, ಉದ್ಯಮಿ ಹರಿದಾಸ್ ಪ್ರಭು, ಪಂಚಾಯತ್ ಸದಸ್ಯರುಗಳಾದ ಕೃಷ್ಣ ಖಾರ್ವಿ, ರಮೇಶ ಖಾರ್ವಿ, ನೇತ್ರಾವತಿ, ಶಶಿಕಲಾ, ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿ ಮಂಜುನಾಥ ದೇವಾಡಿಗ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಶ ಮೊಗವೀರ, ಕಾರ್ಯದರ್ಶಿ ಚಂದ್ರ ಶೆಟ್ಟಿ, ಮುಖ್ಯ ಶಿಕ್ಷಕಿ ಮರ್ಲಿ ಮೊಗವೀರ ವಿದ್ಯಾರ್ಥಿ ನಾಯಕ ರಕ್ಷಕ್ ದೇವಾಡಿಗ ಉಪಸ್ಥಿತರಿದ್ದರು.

ಹಲವಾರು ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಮುಖ್ಯ ಶಿಕ್ಷಕಿ ಮರ್ಲಿ ಮೊಗವೀರ ಸ್ವಾಗತಿಸಿದರೆ ಸಹ ಶಿಕ್ಷಕಿಯರಾದ ಸೀತಾಲಕ್ಷ್ಮಿ, ಮಮತಾ, ರಮ್ಯಾ ಬಹುಮಾನ ವಿಜೇತರ ಯಾದಿ ವಾಚಿಸಿದರು ಸಹಶಿಕ್ಷಕಿ ಚಂದ್ರಾವತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರೆ ಶಿಕ್ಷಕಿ ಶಾಂತ ವಂದಿಸಿದರು ತದನಂತರ ಶಾಲಾ ವಿದ್ಯಾರ್ಥಿಗಳಿಗೆ ಛದ್ಮಾ ವೇಷ ಸ್ಪರ್ಧೆ ನೆಡೆಸಲಾಯಿತು.

ಸಂಜೆ ನೆಡೆದ ವಾರ್ಷಿಕೋತ್ಸವ ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ಶಾಸಕರಾದ ಗುರುರಾಜ್ ಗಂಟಿಹೊಳೆ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಶಾಲಾಭಿವೃಧ್ಧಿ ಸಮಿತಿಯ ಅಧ್ಯಕ್ಷರಾದ ಸುರೇಶ ಎಚ್. ಖಾರ್ವಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬೈಂದೂರು ವಿಧಾನಸಭಾ ಕ್ಷೇತ್ರ ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ, ಬಿಲ್ಲವ ಸಮಾಜ ಸೇವಾ ಸಂಘ ಕೊಡೇರಿ ಇದರ ಗೌರವಾಧ್ಯಕ್ಷರು ಹಾಗೂ ಮುಂಬಯಿ ಉದ್ಯಮಿ ಮಹಾದೇವ ಪೂಜಾರಿ, ಸರಕಾರಿ ನೌಕರರ ಸಂಘದ ಬೈಂದೂರು ತಾಲೂಕು ಅಧ್ಯಕ್ಷರು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶೇಖರ ಪೂಜಾರಿ, ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೇಖರ ಖಾರ್ವಿ, ಸದಸ್ಯೆ ನೇತ್ರಾವತಿ, ಶಿಕ್ಷಣ ಇಲಾಖೆಯ ಇ.ಸಿ.ಒ ಹಾಗೂ ಶಾಲಾ ಹಳೆ ವಿದ್ಯಾರ್ಥಿ ಸತ್ಯನಾ ಕೊಡೇರಿ, ಮತ್ಸ್ಯೋದ್ಯಮಿ ೮೮೮ ಮಂಜುನಾಥ, ಶ್ರೀರಾಮ್ ಮೀನುಗಾರರ ಸೇವಾ ಸಮಿತಿ ಅಧ್ಯಕ್ಷರಾದ ಚಂದ್ರ ಡಿ. ಖಾರ್ವಿ, ಉಪನ್ಯಾಸಕ ಸತ್ಯನಾರಾಯಣ ಪೂಜಾರಿ, ಜಯಾನಂದ ಪಟಗಾರ, ವಿಶ್ವನಾಥ ಪೂಜಾರಿ, ಕೊಲ್ಲೂರು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯೆ  ಧನಾಕ್ಷಿ ವಿ. ಪೂಜಾರಿ, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು ಮತ್ತು ಪಂಚಾಯತ್ ಸದಸ್ಯರಾದ  ಆನಂದ ಪೂಜಾರಿ ಕೊಡೇರಿ, ಮುಖ್ಯ ಶಿಕ್ಷಕಿ ಮರ್ಲಿ ಮೊಗವೀರ, ವಿದ್ಯಾರ್ಥಿ ನಾಯಕ ರಕ್ಷಕ್ ದೇವಾಡಿಗ ಉಪಸ್ಥಿತರಿದ್ದರು.

ಹಳೆ ವಿದ್ಯಾರ್ಥಿಗಳಿಗೆ ಮತ್ತು ಶಾಲಾ ವಿದ್ಯಾರ್ಥಿಗಳ ಪೋಷಕರಿಗೆ ನೆಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿಜೇತರ ಯಾದಿಯನ್ನು ದೈಹಿಕ ಶಿಕ್ಷಕರಾದ ಚಿತ್ತರಂಜನ್ ಹೆಗ್ಡೆ ಮತ್ತು ಶಿಕ್ಷಕಿ ಚಂದ್ರಾವತಿ ಶೆಟ್ಟಿ ವಾಚಿಸಿದರು. ಸಾಧನೆಗೈದ ವಿದ್ಯಾರ್ಥಿಗಳಾದ ಸಾಗರಿಕಾ ಮತ್ತು ಧನುಷ್ ಹಾಗೂ ಹಳೆ ವಿದ್ಯಾರ್ಥಿಗಳಾದ ಸತ್ಯನಾ ಕೊಡೇರಿ ಮತ್ತು ಸತ್ಯನಾರಾಯಣ ಹಾಗೂ ಸರಕಾರಿ ನೌಕರರ ಸಂಘದ ಬೈಂದೂರು ತಾಲೂಕು ಅಧ್ಯಕ್ಷರಾದ ಶೇಖರ್ ಪೂಜಾರಿ ಇವರುಗಳನ್ನು ಸನ್ಮಾನಿಸಿದರೆ ಕೊಡುಗೈದಾನಿಗಳಿಗೆ ಮತ್ತು ವಿದ್ಯಾರ್ಥಿಗಳ ಪೋಷಕರಿಗೆ ಗೌರವ ಅಭಿನಂದನೆ ಸಲ್ಲಿಸಲಾಯಿತು.

ಶಾಲಾ ಹಳೆ ವಿದ್ಯಾರ್ಥಿ ಉಪನ್ಯಾಸಕ ಸತ್ಯನಾರಾಯಣ ಪೂಜಾರಿ ಸ್ವಸ್ತಿವಾಚನಗೈದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರೆ ಮುಖ್ಯ ಶಿಕ್ಷಕಿ ಮರ್ಲಿ ಮೊಗವೀರ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಶಾಲಾ ವರದಿಯನ್ನು ಶಿಕ್ಷಕಿ ಸೀತಾಲಕ್ಷ್ಮಿ ಮತ್ತು ಹಳೆ ವಿದ್ಯಾರ್ಥಿಗಳ ಸಂಘದ ವರದಿಯನ್ನು ಸಂಘದ ಕೋಶಾಧಿಕಾರಿ ಹಾಗೂ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಖಾರ್ವಿ ವಾಚಿಸಿದರು.

ಶಿಕ್ಷಕಿ ಸ್ವಾತಿ ಹೆಬ್ಬಾರ್ ನಿರೂಪಿಸಿ, ಶಿಕ್ಷಕಿ ಚಂದ್ರಾವತಿ ಶೆಟ್ಟಿ ವಂದಿಸಿದರು. ಬಳಿಕ ಜರಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಂಗನವಾಡಿ ಪುಟಾಣಿಗಳು ಮತ್ತು ಶಾಲಾ ವಿದ್ಯಾರ್ಥಿಗಳು ನೃತ್ಯಗೈದರೆ, ವಿದ್ಯಾರ್ಥಿಗಳು ಏಕಲವ್ಯ ನಾಟಕ ಹಾಗೂ ಹಳೆ ವಿದ್ಯಾರ್ಥಿಗಳು ನೃತ್ಯ ಪ್ರಸ್ತುತಪಡಿಸಿ ನೆರೆದ ವಿದ್ಯಾಭಿಮಾನಿಗಳ ಮನರಂಜಿಸಿದರು.

ಈ ಸಮಾರಂಭದ ಯಶಸ್ಸಿಗಾಗಿ ಗೌರವ ಶಿಕ್ಷಕಿಯರಾದ ಮಮತಾ, ರಮ್ಯಾ, ಲಕ್ಷ್ಮಿ, ಜಯಲಕ್ಷ್ಮಿ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಶ್ರೀಧರ ಖಾರ್ವಿ, ದಿಲೀಪ್ ಖಾರ್ವಿ, ಶಶಿಧರ್ ಖಾರ್ವಿ, ರಾಜೇಶ್ ಖಾರ್ವಿ, ನಾಗರತ್ನಾ, ಶಾಂತ ಪ್ರಭು ಹಳೆ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳಾದ ಹೆಚ್. ಮಂಜುನಾಥ, ವಿಜಯ್ ಪೂಜಾರಿ, ಚಂದ್ರ ಪೂಜಾರಿ, ರಾಮ ಪೂಜಾರಿ, ಪ್ರದ್ಯುಮ್ನ ಹೆಬ್ಬಾರ್, ಶ್ಯಾಮಲಾ, ಪಾರ್ವತಿ, ರಾಮಚಂದ್ರ ಖಾರ್ವಿ ಸಹಕರಿಸಿದರು.              

Exit mobile version