ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: “ಪ್ರತಿಭೆ ನಿಮ್ಮದು ವೇದಿಕೆ ನಮ್ಮದು” ಕಾರ್ಯಕ್ರಮದಡಿ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ 102 ನೇ ತಿಂಗಳ ಕಾರ್ಯಕ್ರಮ ಇತ್ತೀಚೆಗೆ ಯಶಸ್ವಿಯಾಗಿ ನಡೆಯಿತು.
ಇದೇ ವೇದಿಕೆಯಲ್ಲಿ ಫಣಿಗಿರಿ ಪ್ರತಿಷ್ಠಾನ, ಶಿರೂರು ಇವರಿಂದ ಪ್ರಕಟಿತ ಡಾ. 11 ಶಿವಕುಮಾರ ಅಳಗೋಡು ವಿರಚಿತ ಪೌರಾಣಿಕ ಯಕ್ಷಗಾನ ಪ್ರಸಂಗಗಳ ಕೃತಿ ಬಿಡುಗಡೆ ಕಾರ್ಯಕ್ರಮವೂ ಜರಗಿತು.
ಕೃತಿ ಪರಿಚಯವನ್ನು ನಾಗರತ್ನ ಹೇರ್ಳೆ ಅವರು ಮಾಡಿದರು. ಕೃತಿಯನ್ನು ಸುಜಯೀಂದ್ರ ಹಂದೆ ಅವರು ಬಿಡುಗಡೆಗೊಳಿಸಿದರು.
ವೇದಿಕೆಯಲ್ಲಿ ಫಣಿಗಿರಿ ಪ್ರತಿಷ್ಠಾನದ ಅಧ್ಯಕ್ಷ ಉಮೇಶ್ ಶಿರೂರು ಹಾಗೂ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಅವರು ಉಪಸ್ಥಿತರಿದ್ದರು.
ತರಂಗಿಣಿ ಭಜನಾ ಮಂಡಳಿ ಉಡುಪಿ, ಇದರ ಮುಖ್ಯಸ್ಥೆ ಸುಲೇಖಾ ದಯಾನಂದ ಅವರನ್ನು ಅಕಾಡೆಮಿ ವತಿಯಿಂದ ಸಮ್ಮಾನಿಸಲಾಯಿತು. ನಂತರ ತರಂಗಿಣಿ ಭಜನಾ ಮಂಡಳಿ, ಉಡುಪಿ ಇವರು “ಭಜನ್ ಸಂಧ್ಯಾ ಕಾರ್ಯಕ್ರಮ ನಡೆಸಿಕೊಟ್ಟರು. ನಿವೃತ್ತ ಶಿಕ್ಷಕ ನಾಗೇಶ್ ಶ್ಯಾನುಭಾಗ್ ಅವರು ಕಾರ್ಯಕ್ರಮ ನಿರೂಪಿಸಿದರು.