ಕುಂದಾಪ್ರ ಡಾಟ್ ಕಾಂ ಸುದ್ದಿಇ.
ಕುಂದಾಪುರ: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ನವದೆಹಲಿ ನವೆಂಬರ್ 2024 ರಲ್ಲಿ ಏರ್ಪಡಿಸಿದ ಸಿಎ ಫೈನಲ್ ಪರೀಕ್ಷೆಯಲ್ಲಿ ಕುಂದಾಪುರ-ಕೋಣಿ ಗ್ರಾಮದ ಅಕ್ಷಯ ಪೂಜಾರಿ ತೇರ್ಗಡೆ ಹೊಂದಿ ಸಿಎ ಪದವಿ ಪಡೆದಿದ್ದಾರೆ.
ಕುಂದಾಪುರದ ಮೆ| ಟಿ. ಎನ್. ಪ್ರಭು ಎಂಡ್ ಕೋ. ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯಲ್ಲಿ ತರಬೇತಿ ಪಡೆದು ಸಾಧನೆ ಮಾಡಿದ್ದಾರೆ.
ಈತ ಕೋಣ್ಸಾಲ್ ಮನೆ, ಕೋಣಿ ಬಾಬು ಪೂಜಾರಿ ಮತ್ತು ಪದ್ದು ಪೂಜಾರಿ ಅವರ ಪುತ್ರ.
ಲೆಕ್ಕ ಪರಿಶೋಧಕ ಟಿ. ಎನ್. ಪ್ರಭು ಹಾಗೂ ಸಂಸ್ಥೆಯ ಸಹೋದ್ಯೋಗಿಗಳು ಇವರ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

