Kundapra.com ಕುಂದಾಪ್ರ ಡಾಟ್ ಕಾಂ

ವಾರಾಹಿ ಕಾಲುವೆಗೆ ತಕ್ಷಣ ನೀರು ಹಾಯಿಸಲು ನಿರ್ದೇಶನ ನೀಡುವಂತೆ ಡಿಸಿಎಂಗೆ ಎಚ್‌. ಹರಿಪ್ರಸಾದ್‌ ಶೆಟ್ಟಿ ಕಾನ್ಮಕ್ಕಿ ಅವರಿಂದ ಮನವಿ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ವಾರಾಹಿ ಕಾಲುವೆಯಲ್ಲಿ ಈ ತನಕ ನೀರು ಹಾಯಿಸದಿರುವುದರಿಂದ ಹಿಂಗಾರು ಬಿತ್ತನೆ ಮಾಡಿರುವ ರೈತರು ಕಂಗಾಲಾಗಿದ್ದಾರೆ. ಈ ನೀರನ್ನೇ ನಂಬಿ ಸಾವಿರಾರು ಎಕ್ರೆ ಅಡಿಕೆ ತೋಟ ಮಾಡಿದ್ದು ತೋಟಗಳಿಗೆ ನೀರಿನ ಕೊರತೆಯಾಗಿದೆ. ಹಾಗಾಗಿ ವಾರಾಹಿ ಕಾಲುವೆಗೆ ತಕ್ಷಣ ನೀರು ಹಾಯಿಸುವಂತೆ ರಾಜ್ಯ ನೀರಾವರಿ ಸಚಿವರು ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ ಅವರಿಗೆ ಕುಂದಾಪುರದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಎಚ್‌. ಹರಿಪ್ರಸಾದ್‌ ಶೆಟ್ಟಿ ಕಾನ್ಮಕ್ಕಿ ಅವರು ಮನವಿ ಮಾಡಿದ್ದಾರೆ.

2014 ನೇ ಸಾಲಿನಲ್ಲಿ ವಾರಾಹಿ ಯೋಜನೆ ಉದ್ಘಾಟನೆಗೊಂಡು ಕಾಲುವೆಗೆ ನೀರು ಹಾಯಿಸಲಾಗಿತ್ತು.ಪ್ರಾರಂಭದ 2 ವರ್ಷದಲ್ಲಿ ಖಾಸಗಿಯವರ ಹಿತಾಸಕ್ತಿಗೆ ಕಾಲುವೆಗೆ ನೀರು ಹಾಯಿಸಲು ಅನಗತ್ಯ ವಿಳಂಬ ಮಾಡುತ್ತಿದ್ದರು.ಇದರಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನಾನೂಕೂಲವಾಗುತಿತ್ತು.

2016 ನೇ ಸಾಲಿನಲ್ಲಿ ಉಡುಪಿ ಜಿಲ್ಲಾ ರೈತ ಸಂಘದ ಮನವಿ ಮೇರೆಗೆ ಅಂದಿನ ನೀರಾವರಿ ಸಚಿವರು ಈ ವಿಚಾರದ ಕುರಿತು ಅಧಿಕಾರಿಗಳ, ಜನಪ್ರತಿನಿಧಿಗಳ ಮತ್ತು ರೈತರ ಸಭೆ ಕರೆದು ಪ್ರತಿ ವರ್ಷ ಕಾಲುವೆಗೆ ನೀರು ಹಾಯಿಸಲು ವಿಳಂಬ ಮಾಡುವಂತಿಲ್ಲ. ಯಾವುದೇ ಕಾರಣ ನೀಡದೇ ಪ್ರತಿವರ್ಷ ಡಿಸೆಂಬರ್  1 ಕ್ಕೆ ನೀರು ಹಾಯಿಸಬೇಕು ಎಂದು ಆದೇಶಿಸಿದ್ದರು ಮತ್ತು ಉಡುಪಿ ಜಿಲ್ಲಾಧಿಕಾರಿಯವರು ಪ್ರತಿವರ್ಷ ಈ ಬಗ್ಗೆ ಗಮನಹರಿಸಬೇಕೆಂದು ಇಲಾಖಾ ಆದೇಶ ಮಾಡಿದ್ದರು. ಅಂದಿನಿಂದ ಪ್ರತಿವರ್ಷ ಡಿಸೆಂಬರ್ ಮೊದಲ ವಾರದಲ್ಲಿ ಕಾಲುವೆಗೆ ನೀರು ಹಾಯಿಸಲಾಗುತಿತ್ತು.

ಈ ವರ್ಷ ಈ ತನಕ ಕಾಲುವೆಗೆ ನೀರು ಹಾಯಿಸಿಲ್ಲ ಯಾವಾಗ ನೀರು ಹಾಯಿಸಲಾಗುವುದೆಂದು ಪ್ರಕಟಣೆ ಮಾಡಿಲ್ಲ. ಈಗಾಗಲೇ ಹಿಂಗಾರು ಬಿತ್ತನೆ ಮಾಡಿರುವ ರೈತರು ಕಂಗಾಲಾಗಿದ್ದಾರೆ. ಈ ನೀರನ್ನೇ ನಂಬಿ ಸಾವಿರಾರು ಎಕ್ರೆ ಅಡಿಕೆ ತೋಟ ಮಾಡಿದ್ದು ತೋಟಗಳಿಗೆ ನೀರಿನ ಕೊರತೆಯಾಗಿದೆ. ಪ್ರತಿವರ್ಷ ಮಳೆಗಾಲದಲ್ಲಿ ಕಾಲುವೆಗೆ ಹಾನಿಯಗುವುದು ಸಾಮಾನ್ಯ ವಿಚಾರ. ವಾರಾಹಿ ಇಲಾಖೆ ನೆಡದದ್ದೇ ದಾರಿ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ವರ್ಷ ರೈತರು ಕಾಡಿಬೇಡಿ ನೀರು ಪಡೆಯುವ ಪರಿಸ್ಥಿತಿ ಎದುರಾಗಿರುವುದು ನೋವಿನ ಸಂಗತಿ.

 ಆದ್ದರಿಂದ ತಾವು ಕೂಡಲೇ ಮದ್ಯಪ್ರವೇಶಿಸಿ ತಕ್ಷಣ ವಾರಾಹಿ ಕಾಲುವೆಗೆ ನೀರು ಹಾಯಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೆಶನ ನೀಡಬೇಕಾಗಿ ಎಚ್‌. ಹರಿಪ್ರಸಾದ್‌ ಶೆಟ್ಟಿ ಕಾನ್ಮಕ್ಕಿ ಮನವಿ ಮಾಡಿದ್ದಾರೆ.

Exit mobile version