Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಇಲ್ಲಿನ ಮರವಂತೆ ಗ್ರಾಮದ ನಿರೋಣಿ ಬುಕ್ಕಿಮನೆ ಎಂಬಲ್ಲಿ ಜಗನ್ನಾಥ ದೇವಾಡಿಗ (55) ಅವರು ಸೋಮವಾರದಂದು ತನ್ನ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅವರಿಗೆ ಮಧ್ಯಪಾನ ಚಟ ಹೊಂದಿದ್ದು ತನ್ನ ಹೆಂಡತಿ, ಮಕ್ಕಳು ತನ್ನ ಜೊತೆ ಇಲ್ಲದೇ ಇರುವ ವಿಚಾರದಲ್ಲಿ ಕೊರಗಿನಿಂದ ಜಿಗುಪ್ಪೆಗೊಂಡು ಕೃತ್ಯ ಎಸಗಿದ್ದಾರೆ ಎಂದು ಸಹೋದರಿ ಗಿರಿಜಾ ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version