Kundapra.com ಕುಂದಾಪ್ರ ಡಾಟ್ ಕಾಂ

ಕೊರ್ಗಿ: ಹೊಸವರ್ಷವನ್ನು ವಿಶೇಷವಾಗಿ ಆಚರಿಸಿದ ಟೀಮ್‌ ಊರ್ಮನಿ ಮಕ್ಕಳ ತಂಡ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಗ್ರಾಮ ಪಂಚಾಯತ್ ಕೊರ್ಗಿ ಇವರ ಬೆಂಬಲದೊಂದಿಗೆ ಹೊಸವರ್ಷದ ದಿನದಂದು ಕೊರ್ಗಿ ಗ್ರಾಮದ ಹೆಸ್ಕೂತ್ತೂರರಿಂದ ಹೊಸಮಠದವರೆಗೆ ಸುಮಾರು 8 ಕಿಲೊಮೀಟರ್ ನಷ್ಟು ದೂರ ರಸ್ತೆಯ ಎರಡೂ ಬದಿಯ ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯಗಳನ್ನು ಸ್ವಚ್ಚಗೊಳಿಸುವ ಮೂಲಕ ಮಾದರಿಯಾದರು.

ಕೊರ್ಗಿ ಗ್ರಾಮದ ಅಲ್ಲಲ್ಲಿ  ಈ ನನ್ನ ಗ್ರಾಮವನ್ನು ಸ್ವಚ್ಚವಾಗಿಡಲು ಹೇಳುವುದರ ಜೊತೆಗೆ ನಾನು ಸ್ವಚ್ಚತೆಯಲ್ಲಿ ಕೊರ್ಗಿ ಗ್ರಾಮವನ್ನು ಇಡುತ್ತೇನೆ ಎಂಬ ಬಿತ್ತಿ ಪತ್ರ ಅಂಟಿಸುವ ಮೂಲಕ ಜಾಗ್ರತಿ ಮೂಡಿಸಿದರು.

ಸುಮಾರು 20 ಕ್ವಿಂಟಲ್‌ಗೂ ಹೆಚ್ಚು ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯಗಳನ್ನು ಹೆಕ್ಕಿ ವಿಲೇವಾರಿ ಮಾಡುವುದರ ಮೂಲಕ ಟೀಮ್ ಊರ್ಮನಿ ಮಕ್ಕಳ ಸಮಾಜ ಸೇವಾ ತಂಡವು ಇತರರಿಗೂ ಮಾದರಿ.

ಹೊಸವರ್ಷಕ್ಕೆ ಈ ಕಾಲದ ಹುಡುಗರಿಗೆ ಟೀಮ್ ಊರ್ಮನಿ ಮಕ್ಕಳ ತಂಡದ ಹುಡುಗರ ಈ ಕಾರ್ಯಕ್ಕೆ ಮೆಚ್ಚಲೆಬೇಕು. ಕೊರ್ಗಿ ಗ್ರಾಮದ ಸ್ವಚ್ಚತೆಗಾಗಿ ಬೆಳಿಗ್ಗೆ 9:00 ರಿಂದ ಸಂಜೆ  6:30 ತನಕ ಒಂದು ನಿಮಿಷವೂ ಬಿಡುವಿಲ್ಲದೆ ಮಾಡಿದ ಈ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚಿಗೆ ವ್ಯೆಕ್ತ ಪಡಿಸಿದರು.

Exit mobile version