Kundapra.com ಕುಂದಾಪ್ರ ಡಾಟ್ ಕಾಂ

ಮದರ್ ತೆರೇಸಾಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ
: ಜ.2ರಂದು ದುರ್ಗಾ ಆಂಗ್ಲಮಾಧ್ಯಮ ಶಾಲೆ ಕೊಕ್ಕರ್ಣೆ ಬ್ರಹ್ಮಾವರದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮದರ್ ತೆರೇಸಾ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರತಿಭೆಯನ್ನು ಪ್ರದರ್ಶಿಸುವುದರ ಮೂಲಕ  ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ವಿದ್ಯಾರ್ಥಿಗಳಾದ ಪ್ರೀತಮ್ (9ನೇ ತರಗತಿ) ಮತ್ತು ಆದಿತ್ಯ ಬಿ. (ದ್ವಿತೀಯ ಪಿಯುಸಿ)ರಸಪ್ರಶ್ನೆ ಸ್ಪರ್ಧೆಯಲ್ಲಿ   ಪ್ರಥಮ, ಶ್ರೀಶಾಂತ್ ಎಸ್. (ಪ್ರಥಮ ಪಿಯುಸಿ) ಕನ್ನಡ ಕವನವಾಚನ ಸ್ಪರ್ಧೆಯಲ್ಲಿ ತೃತೀಯ ಹಾಗೂ ಪ್ರತೀಕ್ಷಾ (ಪ್ರಥಮ ಪಿಯುಸಿ) ಚರ್ಚಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನದಲ್ಲಿ ಆಯ್ಕೆಯಾಗಿರುತ್ತಾರೆ.

ಈ ಎಲ್ಲಾ ಪ್ರತಿಭೆಗಳಿಗೆ ಆಡಳಿತಮಂಡಳಿ, ಪ್ರಾಂಶುಪಾಲರು, ಮುಖ್ಯಶಿಕ್ಷಕರು ಶಿಕ್ಷಕ ಮತ್ತು ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಶುಭಕೋರಿರುತ್ತಾರೆ.

Exit mobile version