ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕೆ.ಎಸ್.ಹೆಗ್ಡೆ ಮತ್ತು ಎ.ಬಿ. ಶೆಟ್ಟಿ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ದಿ. ನಾರಾಯಣ ಬಿಲ್ಲವ ಮತ್ತು ದಿ. ಜಾನಕಿ ನಾರಾಯಣ ಬಿಲ್ಲವ ನೆನಪಿನಲ್ಲಿ ಉಚಿತ ದಂತ ಚಿಕಿತ್ಸೆ ಮತ್ತು ಆರೋಗ್ಯ ತಪಾಸಣಾ ಶಿಬಿರವು ಶಿರೂರು ಪಿ.ಎಂ. ಶ್ರೀ ಮಾದರಿ ಹಿ.ಪ್ರಾ. ಶಾಲೆಯಲ್ಲಿ ಜ.12 ರಂದು ಪೂ.9 ರಿಂದ ಅ.2ರ ತನಕ ನಡೆಯಲಿದೆ.
ಶಿಬಿರದಲ್ಲಿ ನುರಿತ ದಂತ ವೈದ್ಯರು, ಕಿವಿ ಮೂಗು ಗಂಟಲು ತಜ್ಞರು, ಮಕ್ಕಳ ತಜ್ಞರು ಹಾಗೂ ಇತರೇ ತಜ್ಞ ವೈದ್ಯರಿಂದ ದಂತ ತಪಾಸಣೆ, ಇಸಿವೆ, ರಕ್ತ ಪರೀಕ್ಷೆ, ಶುಗರ್ ಟೆಸ್ಟ್ ಕಿವು ಮೂಗು ಗಂಟಲು ಪರೀಕ್ಷೆ, 12 ವರ್ಷ ಒಳಗಿನ ಮಕ್ಕಳಿಗೆ ತಪಾಸಣೆ, ಇತ್ಯಾದಿ ಆರೋಗ್ಯ ತಪಾಸಣೆ ಮಾಡಲಾಗುವುದು. ಅಗತ್ಯ ಲಭ್ಯ ಔಷಧಿಗಳನ್ನು ಒದಗಿಸಲಾಗುತ್ತದೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.

