Site icon Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ನಾಪತ್ತೆಯಾದ ಮೀನುಗಾರನ ಪತ್ತೆಗೆ ಸಹಕಾರ ನೀಡಲು ಜಿಲ್ಲಾಡಳಿತಕ್ಕೆ ಕುಟುಂಬಿಕರ ಮನವಿ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಗಂಗೊಳ್ಳಿ ಗ್ರಾಮದ ನಿವಾಸಿ ನಾರಾಯಣ ಮೊಗವೀರ (59) ಅವರು ಸರ್ವಮಂಗಲೇ ಮೀನುಗಾರಿಕಾ ಪರ್ಷಿನ್ ಬೋಟ್‌ನಲ್ಲಿ ಜ.2ರಂದು ಮೀನುಗಾರಿಕೆ ಮಾಡುತ್ತಿದ್ದ ಸಮಯದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿ ಅವರ ಸುಳಿವು ಇನ್ನೂ ಕೂಡ ಪತ್ತೆಯಾಗಿಲ್ಲ.

ಸಮುದ್ರದಲ್ಲಿ ನಾಪತ್ತೆಯಾಗಿರುವ ಸಹೋದರನನ್ನು ಹುಡುಕಲು ಜಿಲ್ಲಾಡಳಿತ ಸಹಕಾರ ನೀಡಬೇಕೆಂದು ವಿಶ್ವನಾಥ ಗಂಗೊಳ್ಳಿ ಮನವಿ ಮಾಡಿದ್ದಾರೆ.

ನಾರಾಯಣ ಮೊಗವೀರ ಅವರು ತಮ್ಮ ಹೊಟ್ಟೆ ಪಾಡಿಗೆಂದು ಜ. 2 ರಂದು ಪರ್ಷಿನ್ ಬೋಟ್ ಮೂಲಕ ಮೀನುಗಾರಿಕೆಗೆ ತೆರಳಿದ್ದರು. ಮೀನುಗಾರಿಕೆ ಮಾಡುತ್ತಿದ್ದ ಸಮಯದಲ್ಲಿ ಕಾಲು ಜಾರಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದಾರೆ. ಜ.7ರ ತನಕವೂ ಅವರ ಸುಳಿವು ಸಿಗದೆ ಇರುವುದರಿಂದ ಕುಟುಂಬ ಕಂಗಾಲಾಗಿದೆ.

ಮುಳುಗು ತಜ್ಞ ದಿನೇಶ್ ಖಾರ್ವಿ ತಂಡ ಮತ್ತು ಗಂಗೊಳ್ಳಿ ಕರಾವಳಿ ಕಾವಲು ಪಡೆ ಪೊಲೀಸರ ಸಹಕಾರದಿಂದ ಹಾಗೂ ಖಾಸಗಿ ಬೋಟ್ ಸಹಾಯದಿಂದ ಕಳೆದ ಆರು ದಿನಗಳಿಂದ ಸಮುದ್ರದಲ್ಲಿ ಹುಡುಕಾಟ ಮಾಡಿದ್ದರೂ ಸುಳಿವು ಸಿಕ್ಕಿಲ್ಲ, ಖಾಸಗಿ ಬೋಟ್‌ ಗೆ ಡಿಸೆಲ್ ತುಂಬಿಸಿಕೊಂಡು ಸಮುದ್ರದಲ್ಲಿ ಹುಡುಕಾಟ ಮಾಡಲು ದಿನವೊಂದಕ್ಕೆ ಕನಿಷ್ಠ ಪಕ್ಷ 30 ಸಾವಿರ.ರೂ ತಗಲುತ್ತಿದೆ. ಬಡ ಮೀನುಗಾರ ಕುಟುಂಬ ಕಂಗಾಲಾಗಿದೆ. ತಮ್ಮ ಕುಟುಂಬದ ಸದಸ್ಯನನ್ನು ಹುಡುಕಲು ಜಿಲ್ಲಾಡಳಿತ ಹಾಗೂ ಸಂಘ ಸಂಸ್ಥೆಗಳು ಸಹಕಾರ ನೀಡಬೇಕೆಂದು ವಿನಂತಿಸಿಕೊಂಡಿದ್ದಾರೆ.

Exit mobile version