Kundapra.com ಕುಂದಾಪ್ರ ಡಾಟ್ ಕಾಂ

ಭರತನಾಟ್ಯ ಕಿರಿಯ ದರ್ಜೆ ಪರೀಕ್ಷೆ: ನಮಸ್ವಿ ಎಸ್. ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ಮೈಸೂರು ಇವರ ಆಶ್ರಯದಲ್ಲಿ 2024ರಲ್ಲಿ ನಡೆದ ವಿಶೇಷ ಸಂಗೀತ, ನೃತ್ಯ ಹಾಗೂ ತಾಳವಾದ್ಯ ಪರೀಕ್ಷೆಯಲ್ಲಿ ಕುಂದಾಪುರದ ನಮಸ್ವಿ ಎಸ್. ಶೆಟ್ಟಿಗಾರ್ ಅವರು ಭರತನಾಟ್ಯ ಕಿರಿಯ ದರ್ಜೆ ಪರೀಕ್ಷೆಯಲ್ಲಿ 92.85% ಅಂಕಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಈಕೆ ಶ್ರುತಿ ಭಟ್ ಉದ್ಯಾವರ ಹಾಗೂ ಪ್ರಸ್ತುತ ಆನಂದ್ ಕೇರಳ ಅವರಲ್ಲಿ ಭರತನಾಟ್ಯ ಅಭ್ಯಾಸವನ್ನು ಮಾಡುತ್ತಿದ್ದಳು. ಅವರು ಕುಂದಾಪುರ ತಾಲೂಕಿನ  ಶ್ರೀಧರ್ ಕುಮಾರ್ ಹಾಗೂ ಲಾವಣ್ಯ ಶ್ರೀಧರ್ ದಂಪತಿಗಳ ಪುತ್ರಿ.

Exit mobile version