ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಲಾವಣ್ಯ ಬೈಂದೂರು ಇದರ ೨೦೨೫-೨೭ನೇ ಸಾಲಿನ ನೂತನ ಅಧ್ಯಕ್ಷರಾಗಿ ನರಸಿಂಹ ಬಿ. ನಾಯಕ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎಚ್. ವಿಶ್ವನಾಥ ಆಚಾರ್ಯ ಪುನರಾಯ್ಕೆಯಾಗಿದ್ದಾರೆ.
ಶನಿವಾರ ಸಂಜೆ ಲಾವಣ್ಯ ರಂಗಮನೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು ಗೌರವಾಧ್ಯಕ್ಷರಾಗಿ ಯು. ಶ್ರೀನಿವಾಸ ಪ್ರಭು, ವಿ. ಆರ್. ಬಾಲಚಂದ್ರ, ಉಪಾಧ್ಯಕ್ಷರಾಗಿ ರಾಮ ಕೆ., ರವೀಂದ್ರ ಶ್ಯಾನುಭಾಗ್, ಜತೆಕಾರ್ಯದರ್ಶಿಯಾಗಿ ಗಣೇಶ್ ಪರಮಾನಂದ, ರೋಶನ್ ಕುಮಾರ್, ರಾಜೇಶ್ ನಾಯ್ಕ, ಕೋಶಾಧಿಕಾರಿ ಸುರೇಶ್ ಹುದಾರ್, ಸಂಘಟನಾ ಕಾರ್ಯದರ್ಶಿಯಾಗಿ ಸುಮಂತ್ ಆಚಾರ್ಯ, ಶಶಾಂಕ್ ಕಾರಂತ್, ಶ್ರೀಧರ ವಸ್ರೆ. ವ್ಯವಸ್ಥಾಪಕರಾಗಿ ಹರೆಗೋಡು ಉದಯ್ ಆಚಾರ್ಯ, ಮೂರ್ತಿ ಬೈಂದೂರು, ಸುಬ್ರಹ್ಮಣ್ಯ ಎಸ್., ಗೌರವ ಸಲಹೆಗಾರರಾಗಿ ನಾಕಟ್ಟೆ ನಾಗರಾಜ ಶೆಟ್ಟಿ, ಸದಾಶಿವ ಡಿ. ಪಡುವರಿ, ನಾಗರಾಜ ಗಾಣಿಗ ಬಂಕೇಶ್ವರ, ವಿಶ್ವನಾಥ ಶೆಟ್ಟಿ, ಸುನಿಲ್ ಎಚ್. ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಿ. ಗಣೇಶ್ ಕಾರಂತ್, ಬಿ. ರಾಮ ಟೈಲರ್, ಗಣಪತಿ ಎಸ್., ಗಿರೀಶ್ ಬೈಂದೂರು, ಬಿ. ಕೃಷ್ಣಮೂರ್ತಿ ಕಾರಂತ್, ಸತ್ಯಪ್ರಸನ್ನ, ನಾಗೇಂದ್ರ ಬಂಕೇಶ್ವರ, ಬಾಲಕೃಷ್ಣ ಬಿ., ನಾರಾಯಣ ಕೆ., ನಾಗರಾಜ ಯಡ್ತರೆ, ದಯಾನಂದ ಪಿ., ದಿನೇಶ್ ಕೆ, ರಾಜಶೇಖರ್, ನಾಗರಾಜ ಕಾರಂತ್ ಅವರು ಆಯ್ಕೆಯಾದರು.