Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಮಕರ ಸಂಕ್ರಾಂತಿ ಹಬ್ಬ ಮತ್ತು ಸಾಮೂಹಿಕ ಹುಟ್ಟುಹಬ್ಬ ಕಾರ್ಯಕ್ರಮ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ಮಕ್ಕಳಿಗೆ ಸಂಸ್ಕೃತಿ ಸಂಸ್ಕಾರದ ಅರಿವು, ದೇಶಭಕ್ತಿಯ ಒಳ್ಳೆಯ  ಶಿಕ್ಷಣ ನೀಡುವುದು ಪೋಷಕರ ಮುಂದಿರುವ ಇಂದಿನ ದೊಡ್ಡ ಸವಾಲಾಗಿದೆ. ಮಕ್ಕಳ ಮನಸ್ಸು ಬಹಳ ಸೂಕ್ಷ್ಮ ಮತ್ತು ಸಂವೇದನಾಶೀಲ ಆಗಿರುತ್ತದೆ.  ಮನೆ ಮತ್ತು ಶಾಲೆಯ ವಾತಾವರಣದಲ್ಲಿ ಕಾಣುವ ಶಿಸ್ತು ಸಂಸ್ಕಾರಗಳನ್ನು  ಅವು ಚಾಚೂ ತಪ್ಪದೇ  ಅನುಸರಿಸುತ್ತವೆ.  ಸಂಸ್ಕಾರಯುತ  ಶಿಕ್ಷಣ ನೀಡುವುದರಲ್ಲಿ ಸೇವಾ ಸಂಗಮ ಶಿಶು ಮಂದಿರಗಳು  ಸಕಾರಾತ್ಮಕ ಪಾತ್ರ ನಿರ್ವಹಿಸುತ್ತಿವೆ ಎಂದು ಲೇಖಕ ಬೈಂದೂರು ಚಂದ್ರಶೇಖರ ನಾವಡರು ಹೇಳಿದರು.

ಅವರು ಬೈಂದೂರು ಶಿವಸಂಗಮ ಶಿಶು ಮಂದಿರದಲ್ಲಿ ಮಕರ ಸಂಕ್ರಾಂತಿ ಹಬ್ಬ ಆಚರಣೆ ಮತ್ತು ಸಾಮೂಹಿಕ ಹುಟ್ಟುಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಾತೆಯರು ಮತ್ತು ಮಕ್ಕಳು ಬಹಳ ಸಂಭ್ರಮದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸೇವಾ ಸಂಗಮ ಶಿಶುಮಂದಿರ ಬೈಂದೂರು ಇದರ ಅಧ್ಯಕ್ಷ ಮಂಜುನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅವರು ಸಂಕ್ರಾಂತಿ ಹಬ್ಬದ ಆಚರಣೆ ಮತ್ತು ಮಕ್ಕಳ ಸಾಮೂಹಿಕ  ಹುಟ್ಟುಹಬ್ಬ ಆಚರಣೆಯ ಮಹತ್ವ ವಿವರಿಸಿದರು.

ಈ ಸಂದರ್ಭದಲ್ಲಿ ಸೇವಾ ಸಂಗಮ ಟ್ರಸ್ಟಿನ ಉಪಾಧ್ಯಕ್ಷ ರವೀಂದ್ರ ಶಾನುಭೋಗ್, ವ್ಯವಸ್ಥಾಪಕ ದಿನೇಶ್ , ರಾಮ ಟೈಲರ್, ರಾಜೇಶ್ವರಿ, ನಿರ್ಮಲ ಕಿಣಿ ಉಪಸ್ಥಿತರಿದ್ದರು. ಅನನ್ಯ ಕಾರ್ಯಕ್ರಮ ನಿರ್ವಹಣೆ ಮಾಡಿದರು.

Exit mobile version