Site icon Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ಉಚಿತ ಹೊಲಿಗೆ ತರಬೇತಿ ಶಿಬಿರ ಉದ್ಘಾಟನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ:
ರೋಟರಿ ಕ್ಲಬ್ ಗಂಗೊಳ್ಳಿ ಇದರ ವತಿಯಿಂದ ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ ಉಚಿತ ಹೊಲಿಗೆ ತರಬೇತಿ ಶಿಬಿರದ ಉದ್ಘಾಟನೆಯು ಗಂಗೊಳ್ಳಿಯ ಎಸ್. ವಿ. ಹಿರಿಯ ಪ್ರಾಥಮಿಕ ಶಾಲೆಯ ಟಿ. ವಿಮಲಾ ವಿ. ಪೈ ಸಭಾಂಗಣದಲ್ಲಿ ನಡೆಯಿತು.

ರೋಟರಿ ಜಿಲ್ಲೆ 3182ರ ವಲಯ-2ರ ಅಸಿಸ್ಟೆಂಟ್ ಗವರ್ನರ್ ಮಮತಾ ಆರ್. ಶೆಟ್ಟಿ ಶಿಬಿರವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷೆ ಚಂದ್ರಕಲಾ ಎಸ್. ತಾಂಡೇಲ್ ವಹಿಸಿದ್ದರು. ಸಂಪನ್ಮೂಲ ಶಿಕ್ಷಕರಾದ ಶಾಂತಿ ಖಾರ್ವಿ, ಶಾಲಾ ಮುಖ್ಯ ಶಿಕ್ಷಕ ಜಿ. ವಿಶ್ವನಾಥ್ ಭಟ್, ಕ್ಲಬ್‌ನ ಖಜಾಂಚಿ ಜನಾರ್ಧನ್ ಪೂಜಾರಿ ಪೆರಾಜೆ ಹಾಗೂ ರೋಟರಿ ರೋಟರಿ ಸದಸ್ಯರು ಮತ್ತು ಶಿಬಿರಾರ್ಥಿಗಳು ಉಪಸಿತರಿದ್ದರು.

ರೋಟರಿ ಸದಸ್ಯೆ ಫಿಲೋಮಿನಾ ಫೆನಾಂಡಿಸ್ ಕಾರ್ಯಕ್ರಮ ನಿರೂಪಿಸಿ, ಕೃಷ್ಣ ಪೂಜಾರಿ ವಂದಿಸಿದರು.

Exit mobile version