Site icon Kundapra.com ಕುಂದಾಪ್ರ ಡಾಟ್ ಕಾಂ

ಆಳ್ವಾಸ್ ವಿದ್ಯಾರ್ಥಿಗಳು ಪ್ರತಿನಿಧಿಸಿದ ಮಂಗಳೂರು ವಿವಿ ರನ್ನರ್ಸ್ ಅಪ್

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಮೂಡುಬಿದಿರೆ:
ಲವ್ಲೀ ಪ್ರೊಫೆಷನಲ್ ವಿವಿ ಜಲಂಧರ್ ಪಂಜಾಬ್ ನಲ್ಲಿ ನಡೆದ  ಅಖಿಲ ಭಾರತ ಅಂತರ್ ವಿವಿ ವೇಟ್ ಲಿಫ್ಟಿಂಗ್ ಚಾಂಪಿಯಶಿಪ್‌ನಲ್ಲಿ ಆಳ್ವಾಸ್ ವಿದ್ಯಾರ್ಥಿಗಳು ಪ್ರತಿನಿಧಿಸಿದ್ದ ಮಂಗಳೂರು ವಿವಿ ರನ್ನರ್ಸ್ ಅಪ್  ಪ್ರಶಸ್ತಿಯನ್ನು ಪಡೆದುಕೊಂಡಿತು.

32 ವರ್ಷಗಳ ಬಳಿಕ ರನ್ನರ್ಸ್ ಅಪ್ ಪ್ರಶಸ್ತಿ ಪಡೆದು ಮಂಗಳೂರು ವಿವಿ ಪ್ರಶಂಸೆಗೆ ಪಾತ್ರವಾಗಿದೆ.  ವಿವಿ ಮಂಗಳೂರು ವಿವಿಯ ಒಟ್ಟು  9 ವಿದ್ಯಾರ್ಥಿಗಳ ತಂಡದಲ್ಲಿ  ಆಳ್ವಾಸ್ ಸಂಸ್ಥೆಯ 6 ವಿದ್ಯಾಥಿಗಳು ಭಾಗಿಯಾಗಿದ್ದರು . ಆಳ್ವಾಸ್ ಕಾಲೇಜಿನ ಪ್ರಶಾಂತ್‌ಗೆ ಬೆಳ್ಳಿ, ಪ್ರತ್ಯುಶ್‌ಗೆ ನಾಲ್ಕನೇ ಸ್ಥಾನ, ಜೋಸುವ ರಾಜಕುಮಾರ್‌ಗೆ ನಾಲ್ಕನೇ ಸ್ಥಾನ ಪಡೆದರು. ಮಂಗಳೂರು ವಿವಿ ರನ್ನರ್ಸ್ ಅಪ್ ಪ್ರಶಸ್ತಿ ಪಡೆಯಲು ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿಗಳ ಕೊಡುಗೆ ಪ್ರಮುಖವಾಗಿದೆ.

ಡಿಸೆಂಬರ್‌ನಲ್ಲಿ ಆಚಾರ್ಯ ನಾಗಾರ್ಜುನ ಯೂನಿವರ್ಸಿಟಿ ಗುಂಟೂರ್‌ನಲ್ಲಿ  ನಡೆದ  ದಕ್ಷಿಣ ಭಾರತ ಅಂತರ್ ವಿ. ವಿ ಚಾಂಪಿಯಶಿಪ್‌ನಲ್ಲಿ 3 ಚಿನ್ನ, 3 ಬೆಳ್ಳಿ ಹಾಗೂ 2 ಕಂಚಿನ ಪದಕದೊಂದಿಗೆ ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದಿತ್ತು. ಇತಿಹಾಸದಲ್ಲೇ ಮೊದಲ ಬಾರಿ ಈ ಸಾಧನೆ ಮಾಡಿದ ಹೆಗ್ಗಳಿಕೆ ಮಂಗಳೂರು ವಿವಿಗೆ ಸಲ್ಲುತ್ತದೆ.

ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಕ್ರೀಡೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

Exit mobile version