ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಬಂಟಕಲ್‌ನ ಶ್ರೀ ಮಧ್ವ ವಾದಿರಾಜ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ “ರಾಷ್ಟ್ರೀಯ ಯುವ ದಿನ”ದಂದು ಸಂಸ್ಥೆಯ ಇನ್ನೋವೇಶನ್ ಕೌನ್ಸಿಲ್ ಮತ್ತು ಮೂಲ ವಿಜ್ಞಾನ ವಿಭಾಗದ ಸಹಯೋಗದೊಂದಿಗೆ NSS-YRC ಘಟಕವು ಪ್ರೇರಣಾದಾಯಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

“ಯುಥ್ ಫಾರ್ ಎ ಸಸ್ಟೆನೇಬಲ್ ಪ್ಯೂಚರ್” ಶೀರ್ಷಿಕೆಯ ಈ ಅಧಿವೇಶನವನ್ನು ಪ್ರಮುಖ ತಂತ್ರಜ್ಞಾನ ಉದ್ಯಮಿ, ಫೋರ್ತ್‌ಫೋಕಸ್‌ನ ಸಂಸ್ಥಾಪಕ ಮತ್ತು ನಿರ್ದೇಶಕ ವಿ. ಗೌತಮ್ ನಾವಡ ಮಾತನಾಡಿ “ಉದ್ಯಮಶೀಲತೆ ಕೇವಲ ಯಶಸ್ಸಿನ ಬಗ್ಗೆ ಅಲ್ಲ. ವೈಫಲ್ಯಗಳನ್ನು ಸ್ವೀಕರಿಸುವುದು, ಅವುಗಳಿಂದ ಕಲಿಯುವುದು ಮತ್ತು ಮುಂದುವರಿಯುವುದರ ಬಗ್ಗೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ಸಹಾಯಕ ಪ್ರಾಧ್ಯಾಪಕರಾದ ಸಚಿನ್ ಪ್ರಭು ಕೆ ಮತ್ತು ರಘುನಾಥ್ ಅವರು ಅಲಂಕರಿಸಿದರು.