ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶೈಕ್ಷಣಿಕ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡುತ್ತಿರುವ ಸ್ವಯಂಸ್ಪೂರ್ತಿ ಫೌಂಡೇಶನ್ 3 ಶಾಲೆಗಳಿಗೆ ಸ್ವಯಂಸ್ಪೂರ್ತಿ ಕೌಶಲ್ಯ ಕೇಂದ್ರವನ್ನು ಕೊಡುಗೆಯಾಗಿ ನೀಡಲಿದೆ.
ಈ ಭಾರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ, ಯಳಜಿತ ಹಾಗೂ ಮುಲ್ಲಿಬಾರು ಶಾಲೆಗಳಲ್ಲಿ ಕೌಶಲ್ಯ ಕೇಂದ್ರ ತೆರೆಯಲಾಗುತ್ತಿದೆ. ಜನವರಿ 24 ಹಾಗೂ 25ರಂದು ನಡೆಯುವ ಸಮಾರಂಭವನ್ನು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅವರು ಉದ್ಘಾಟಿಸಲಿದ್ದು, ಆಯಾ ಶಾಲಾ ವ್ಯಾಪ್ತಿಯ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸ್ವಯಂಸ್ಪೂರ್ತಿ ಫೌಂಡೇಶನ್ ಮುಖ್ಯಸ್ಥರಾಗಿರುವ ಸಿ.ಎಸ್. ನಾಗರಾಜ ಶೆಟ್ಟಿ ಅವರ ನೇತೃತ್ವದ ಸ್ವಯಂಸ್ಪೂರ್ತಿ ಫೌಂಡೇಶನ್ ಮೂಲಕ ಸ್ವಯಂಸ್ಪೂರ್ತಿ ಕೌಶಲ್ಯ ಕೇಂದ್ರದಲ್ಲಿ ಕನಿಷ್ಠ ನಾಲ್ಕು ಕಂಪ್ಯೂಟರ್‌ಗಳು, ಕಂಪ್ಯೂಟರ್ ಟೇಬಲ್ – ಖುರ್ಚಿ, ಬುಕ್ ರ್ಯಾಕ್, ಕ್ರೀಡಾ ಸಾಮಾಗ್ರಿಗಳನ್ನು ಗ್ರಾಮೀಣ ಭಾಗದ ಶಾಲೆಗೆ ನೀಡಲಾಗುತ್ತಿದೆ. ಈತನಕ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 12ಕ್ಕೂ ಹೆಚ್ಚು ಶಾಲೆಗಳಿಗೆ ಕೌಶಲ್ಯ ಕೇಂದ್ರ ಒದಗಿಸಿಕೊಡಲಾಗಿದೆ.

