Site icon Kundapra.com ಕುಂದಾಪ್ರ ಡಾಟ್ ಕಾಂ

ಯುವ ಬಂಟರ ಸಂಘದಿಂದ ಕಾವಡಿ ಸದಾಶಿವ ಶೆಟ್ಟಿ ದಂಪತಿಗಳಿಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ತಾಲೂಕು ಯುವ ಬಂಟರ ಸಂಘದ ಪೋಷಕರು, ಗೋವಾ ಬಂಟರ ಸಂಘದ ರಜತ ಸಂಭ್ರಮದ ಅಧ್ಯಕ್ಷರಾದ ಕಾವಡಿ ಸದಾಶಿವ ಶೆಟ್ಟಿ ದಂಪತಿ ಅವರನ್ನು ಯುವ ಬಂಟರ ಸಂಘದ ಪರವಾಗಿ ಸಂಘದ ಮಹಾ ನಿರ್ದೇಶಕರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರು ಸನ್ಮಾನಿಸಿ ಗೌರವಿಸಿದರು.

ಮೈಸೂರಿನ ಜ್ಞಾನ ಸರೋವರ ರೆಸಿಡೆನ್ಸಿಯಲ್ ಸ್ಕೂಲ್ ನ ಆಡಳಿತ ನಿರ್ದೇಶಕರಾದ ಸುಧಾಕರ ಶೆಟ್ಟಿ, ಡಾ. ಗಣನಾಥ ಎಕ್ಕಾರು, ಉಳ್ತೂರು ಮೋಹನದಾಸ್ ಶೆಟ್ಟಿ, ಯುವ ಬಂಟರ ಸಂಘದ ಪೋಷಕರಾದ ಗಿಳಿಯಾರು ಬಡಾಮನೆ ರತ್ನಾಕರ ಜಿ. ಶೆಟ್ಟಿ, ಚಲನಚಿತ್ರ ನಟರಾದ ದಯಾನಂದ ಶೆಟ್ಟಿ, ಹರೀಶ್ ವಾಸು ಶೆಟ್ಟಿ, ಯುವ ಬಂಟರ ಸಂಘದ ಸ್ಥಾಪಕ ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ, ಸಂಘದ ಅಧ್ಯಕ್ಷರಾದ ನಿತೀಶ್ ಶೆಟ್ಟಿ ಬಸ್ರೂರು, ಉಪಾಧ್ಯಕ್ಷರಾದ ಡಾ. ಚೇತನ್ ಶೆಟ್ಟಿ ಕೋವಾಡಿ, ಮಾಜಿ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಕೊಡ್ಲಾಡಿ, ಕಂದಾವರ ರತ್ನಾಕರ ಶೆಟ್ಟಿ, ಹರ್ಷ ಶೆಟ್ಟಿ ಕಾವಡಿ,  ಪ್ರವೀಣ್ ಶೆಟ್ಟಿ ಕಾವಡಿ, ಪ್ರಕಾಶ್ ಶೆಟ್ಟಿ ಆನಗಳ್ಳಿ, ಶರತ್ ಶೆಟ್ಟಿ ಹೇರಿಕುದ್ರು ಮತ್ತು ಗೋವಾ ಬಂಟರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Exit mobile version