Site icon Kundapra.com ಕುಂದಾಪ್ರ ಡಾಟ್ ಕಾಂ

ಶ್ರೀ ವೆಂಕಟರಮಣ ಶಾಲೆಯಲ್ಲಿ ಗೊಂಬೆಗಳ ಮತ್ತು ಆಟಿಕೆಗಳ ವೈವಿಧ್ಯಮಯ ಪ್ರದರ್ಶನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ಪೂರ್ವ ಪ್ರಾಥಮಿಕ ವಿಭಾಗದ, ಗೊಂಬೆಗಳ ಮತ್ತು ಆಟಿಕೆಗಳ ವೈವಿಧ್ಯಮಯ ಪ್ರದರ್ಶನವು ಸಂಸ್ಥೆಯ ಕಾರ್ಯಕರ್ಶಿಗಳಾದ ರಾಧಕೃಷ್ಣ ಶೈಣ್ಯೆ ಅವರ ನೇತೃತ್ವದಲ್ಲಿ ಜರಗಿತು.

ಕಾರ್ಯಕ್ರಮವನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ರಾಧಕೃಷ್ಣ ಶೈಣ್ಯೆ ಅವರು ದೀಪ ಬೆಳಗಿಸುವುದರ ಮೂಲಕ ಚಾಲನೆಯನ್ನು ನೀಡಿದರು. ಚಿತ್ತಾಕರ್ಷಕವಾದ ಗೊಂಬೆಗಳು ಮತ್ತು ಆಟೆಕೆಗಳೊಂದಿಗೆ, ಪುಟಾಣಿಗಳ ಸಂಗೀತ ನರ್ತನವು ಎಲ್ಲರ ಮನಸೊರೆಗೊಂಡವು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್‌ ಗಾಣಿಗ, ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಕೃಷ್ಣ ಅಡಿಗ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ರೇಷ್ಮಾ ಡಿಸೋಜಾ ಹಾಗೂ ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಪ್ರಮೀಳಾ ಡಿಸೋಜಾ ಉಪಸ್ಥಿತರಿದ್ದರು.

ಶಿಕ್ಷಕಿಯರಾದ ಅಶ್ವಿನಿ ಸ್ವಾಗತಿಸಿ, ಸ್ವಪ್ನಾ ವಂದರ್ಪಣೆ ಗೈದರು ಹಾಗೂ ಶ್ರೀಲತಾ ಕಾರ್ಯಕ್ರಮವನ್ನು ಸಯೋಜಿಸಿದರು.

Exit mobile version