Site icon Kundapra.com ಕುಂದಾಪ್ರ ಡಾಟ್ ಕಾಂ

ಬೀಜಾಡಿ ಗ್ರಾಮದ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಬೀಜಾಡಿ ಗ್ರಾಮದ ಪಡುಹೆಬ್ರಿ ಮನೆ ನಿವಾಸಿ ಸುನೀಲ್ ಕುಮಾರ್ (40) ಅವರು ಭಾನುವಾರ ರಾತ್ರಿ ಮನೆ ಸಮೀಪದ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಪರೀತ ಮದ್ಯ ಸೇವನೆ ಚಟ ಹೊಂದಿದ್ದು ಅವರು  ಜೀವನದಲ್ಲಿ ಜಿಗುಪ್ಪೆಗೊಂಡು ಕೃತ್ಯ ಎಸಗಿದ್ದಾರೆ.

ಈ ಹಿಂದೆ ಹೊಟೇಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ಬಿಪಿ, ಶುಗರ್, ಕ್ಷಯ ರೋಗದಿಂದಲೂ ಬಳಲುತ್ತಿದ್ದರು. 7-8 ತಿಂಗಳಿನಿಂದ ಕೆಲಸಕ್ಕೆ ಹೋಗದೇ, ಮನೆಯಲ್ಲಿಯೇ ಇದ್ದರು. ಅಣ್ಣ ಸಂತೋಷ್ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version