ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೂಟ ಮಹಾಜಗತ್ತು ಸಾಲಿಗ್ರಾಮ ರಿ. ಅಂಗಸಂಸ್ಥೆ ಕಿರಿಮಂಜೇಶ್ವರ ಇದರ ವತಿಯಿಂದ ಬೈಂದೂರು ತಾಲೂಕಿನ ಕಿರಿಮಂಜೇಶ್ವರದಲ್ಲಿ ನೂತನವಾಗಿ 1.5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಶ್ರೀ ಗುರುನರಸಿಂಹ ಸಭಾಭವನದ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ನಡೆಯಿತು.
ಸಾಲಿಗ್ರಾಮದ ತಂತ್ರಿ ವೇದಮೂರ್ತಿ ಕೃಷ್ಣ ಸೋಮಯಾಜಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿ, ಭಗವಂತ ಎಲ್ಲರಿಗೂ ಒಳ್ಳೆದು ಮಾಡಲಿ ಎಂದು ಆಶೀರ್ವದಿಸಿದರು.
ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ. ಎಸ್. ಕಾರಂತರು ಮಾತನಾಡಿ, ಈ ಭಾಗದ ವಿಪ್ರರು ವಿಶೇಷವಾಗಿ ಕೃಷಿ, ವೈದಿಕ ಕ್ಷೇತ್ರ, ಬಾಣಸಿಗರು ಹಲವು ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದವರು ಇದ್ದು ಇದು ನಮಗೆ ಹೆಮ್ಮೆಯ ವಿಚಾರವಾಗಿದ್ದು ಕಿರಿಮಂಜೇಶ್ವರದಲ್ಲಿ ನಿರ್ಮಾಣವಾಗಿರುವ ಸಭಾಭವನದ ನಿರ್ಮಾಣದಲ್ಲಿ ಅಂಗಸಂಸ್ಥೆಯ ಪದಾಧಿಕಾರಿಗಳ ಐದು – ಆರು ವರ್ಷಗಳ ಸತತ ಪರಿಶ್ರಮದಿಂದ ಆಗಿರುತ್ತದೆ. ಸಭಾಭವನದ ಸದ್ಬಳಕೆ ಮುಂದಿನ ದಿನದಲ್ಲಿ ಆಗಲಿ ಎಂದು ಶುಭಹಾರೈಸಿದರು.
ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಮಾತನಾಡಿ, ವಿಪ್ರ ಸಮೂದಾಯಕ್ಕೆ ಎಲ್ಲಾ ರೀತಿಯ ಸಹಾಯ ಸಹಕಾರವನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದು ಹೇಳಿದರು.
ಕೂಟ ಮಾಹಜಗತ್ತು ಅಂಗಸಂಸ್ಥೆಯ ಬಿ. ಸಿ. ಗಣೇಶ ಮಯ್ಯ ಅಧ್ಯಕ್ಷತೆ ವಹಿಸಿದ್ದರು,
ವೇದಿಕೆಯಲ್ಲಿ ಕರ್ನಾಟಕ ಬ್ಯಾಂಕ್ ಜಿ. ಎಮ್ ಚಂದ್ರಶೇಖರ ಮಯ್ಯ, ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ ಖಾರ್ವಿ, ವಾಸ್ತು ತಜ್ಞ ಮುರುಳೀಧರ ಕೊಲ್ಲೂರು, ಉಪ್ಪುಂದ ವಲಯ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಯು. ಸಂದೇಶ್ ಭಟ್, ಕುಂದಾಪುರ ತಾಲೂಕು ಹವ್ಯಕ ವಲಯ ಅಧ್ಯಕ್ಷ ಪ್ರೋ. ಎಮ್.ವಿ ನಾರಾಯಣ ಸ್ವಾಮಿ, ಸ್ಥಾನಿಕ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಸತ್ಯನಾರಾಯಣ ಹೆಬ್ಬಾರ್, ಮಹಿಳಾ ವೇದಿಕೆಯ ಅಧ್ಯಕ್ಷೆ ಪ್ರೇಮಾಲೀಲಾ ಕಾರಂತ್, ವೇದ ಮೂರ್ತಿ ಗಣೇಶ್ ಐತಾಳ್ ದೇವಳಿ ಉಸ್ಥಿತರಿದ್ದರು.
ಬೆಳಿಗ್ಗೆ ಸ್ಥಳೀಯ ಋತ್ವಿಜರಿಂದ ನರಸಿಂಹ ಹೋಮ ನಡೆಯಿತು, ಸಭಾಭವನಕ್ಕೆ ದೇಣಿಗೆ ನೀಡಿದವರನ್ನು ಗೌರವಿಸಲಾಯಿತು, ವಿಶಾಲಮ್ಮ, ಮಂಜುನಾಥ ಮಯ್ಯ ಇವರನ್ನು ಸನ್ಮಾನಿಸಲಾಯಿತು, ಕಟ್ಟಡ ನಿರ್ಮಾಣದಲ್ಲಿ ಬಹಳ ಶ್ರಮಿಸಿದ ವಾಸುದೇವ ನಾವುಡ ದಂಪತಿಗಳನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ವೇದ ಮೂರ್ತಿ ಜೋಶಿ ರಾಮಕೃಷ್ಣ ಕಾರಂತ, ಕಂಡಿಕೇರಿ ರಾಘವೇಂದ್ರ ಕಾರಂತ ವೇದಘೋಷ ನಡೆಸಿದರು. ವಿಶಾಲಾಕ್ಷೀ ಜೋಶಿ ಪ್ರಾರ್ಥಿಸಿದರು, ನರಸಿಂಹ ಜೋಯಿಶ್ ಸ್ವಾಗತಿಸಿದರು, ಯು. ಹೆಚ್. ರಾಜರಾಮ್ ಭಟ್ ಪ್ರಾಸ್ಥವಿಕ ಮಾತನಾಡಿದರು. ಪೂರ್ಣಿಮಾ ನರಸಿಂಹ ಜೋಯಿಶ್ ಕಾರ್ಯಕ್ರಮ ನಿರೂಪಿಸಿದರು, ವೇದಮೂರ್ತಿ ಸುಬ್ರಹ್ಮಣ್ಯ ಕಾರಂತ ವಂದಿಸಿದರು. ಕೊನೆಯಲ್ಲಿ ಶಾಂತಿ ಮಂತ್ರ ಪಠಿಸಲಾಯಿತು ಸಭಾ ಕಾರ್ಯಕ್ರಮದ ನಂತರ ಮಹಿಳಾ ವೇದಿಕೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

