ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಬಸ್ರೂರು ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದ 16ನೇ ವರ್ಷದ ಬ್ರಹ್ಮರಥೋತ್ಸವವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಭಾನುವಾರ ಸಂಪನ್ನಗೊಂಡಿತು.
ಬ್ರಹ್ಮರಥೋತ್ಸವ ಪ್ರಯುಕ್ತ ಬೆಳಿಗ್ಗೆ ಶ್ರೀದೇವಿಗೆ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ತುಲಾಭಾರ ಸೇವೆ, ಯಜ್ಞವಿಧಿಗಳು, ಮಹಾ ಪ್ರಾರ್ಥನೆ, ಮಹಾಪೂಜೆ, ಮಹಾ ಬಲಿಪ್ರದಾನ, ಸಾಯಂಕಾಲ ರಥಾರೋಹಣ, ಮಹಾಸಮಾರಾಧನೆ ಬಳಿಕ ರಾತ್ರಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಟಿ. ನಾರಾಯಣ ಪೈ, ಡಾ. ಕಾಶೀನಾಥ ಪೈ, ಟಿ. ಗಣೇಶ ಪ್ರಭು, ಡಾ. ವಿಶ್ವನಾಥ ಪೈ, ಪ್ರಭಾಕರ ಪೈ, ದೇವಸ್ಥಾನದ ಧರ್ಮದರ್ಶಿ ಮಂಡಳಿ ಸದಸ್ಯರು, ದೇವಸ್ಥಾನದ ಅರ್ಚಕರು, ಪುರೋಹಿತರು, ಸೇವಾದಾರರು, ಊರಿನ ಹತ್ತು ಸಮಸ್ತರು, ಸಮಾಜಬಾಂಧವರು, ಭಕ್ತರು ಉತ್ಸವದಲ್ಲಿ ಪಾಲ್ಗೊಂಡಯ

