ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ವಕ್ವಾಡಿ ಗ್ರಾಮದ ಗುಡಾರ್‌ಮಕ್ಕಿ ನಿವಾಸಿ ಬೇಬಿ ಶೆಡ್ತಿ (65) ಅವರು ಮನೆಯ ಹತ್ತಿರದ ಕೊಟ್ಟಿಗೆಯ ಮಾಡಿನ ಪಕ್ಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೆಲವು ದಿನಗಳಿಂದ ಅಧಿಕ ರಕ್ತದೊತ್ತಡ, ಕಾಲು ಗಂಟುನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಖಿನ್ನಿತರಾಗಿ ಮನೆಯ ಹತ್ತಿರದ ಕೊಟ್ಟಿಗೆಯ ಮಾಡಿನ ಪಕ್ಕಾಸಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮೃತರ ಸಹೋದರ ವಿ. ನಾರಾಯಣ ಶೆಟ್ಟಿ ನೀಡಿದ ದೂರಿನಂತೆ ಕುಂದಾಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

