ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿಶ್ವ ರಾಮಕ್ಷತ್ರಿಯ ಮಹಾಸಂಘ ರಿ. ಕುಂದಾಪುರ ಮತ್ತು ರಾಮಕ್ಷತ್ರಿಯ ಸಂಘಗಳು ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಐಎಎಸ್, ಐಪಿಎಸ್, ಐಎಫ್ಎಸ್, ಕೆಎಎಸ್ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಒಂದು ದಿನದ ಉಚಿತ ಮಾಹಿತಿ ಕಾರ್ಯಗಾರವು ಫೆ.09 ಆದಿತ್ಯವಾರದಂದು ಬೆಳಿಗ್ಗೆ 9-00 ರಿಂದ ಮಧ್ಯಾಹ್ನ 2-30ರ ವರೆಗೆ ಬ್ರಹ್ಮಾವರ ತಾಲೂಕಿನ ಉಪ್ಪೂರು ರಾಮಕ್ಷತ್ರಿಯ ಸಭಾಭವನದಲ್ಲಿ ನಡೆಯಲಿದೆ.
ಬೆಂಗಳೂರಿನ ಐ.ಎ.ಎಸ್ ದರ್ಶನ ಸಂಸ್ಥೆಯ ಮುಖ್ಯಸ್ಥರಾದ ದರ್ಶನ್ ಗರ್ತಿಕೆರೆ ಈ ಕಾರ್ಯಗಾರ ನಡೆಸಿಕೊಡಲಿದ್ದಾರೆ. ಇವರೊಂದಿಗೆ ನಮ್ಮ ಸಮಾಜದ ಸಾಧಕರು ಉನ್ನತ ಹುದ್ದೆಯಲ್ಲಿರುವವರು ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆ. ಸ್ಪರ್ಧಾಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿಶ್ವ ರಾಮಕ್ಷತ್ರಿಯ ಮಹಾಸಂಘದ ಅಧ್ಯಕ್ಷರಾದ ಎಚ್.ಆರ್. ಶಶಿಧರ ನಾಯ್ಕ, ಕಾರ್ಯದರ್ಶಿ ಶ್ರೀಧರ್ ಪಿ.ಎಸ್ ಅವರು ಕೋರಿದ್ದಾರೆ.
ಕಾರ್ಯಗಾರದ ಉದ್ಘಾಟನೆಯನ್ನು ವಿಶ್ವ ರಾಮಕ್ಷತ್ರಿಯ ಮಹಾಸಂಘದ ಅಧ್ಯಕ್ಷರಾದ ಎಚ್.ಆರ್. ಶಶಿಧರ ನಾಯ್ಕ ಅವರು ನೆರವೆರಿಸಲಿದ್ದಾರೆ. ಅಧ್ಯಕ್ಷತೆಯನ್ನು ಉಡುಪಿ ರಾಮಕ್ಷತ್ರಿಯ ಸಂಘ ರಿ. ಅಧ್ಯಕ್ಷರಾದ ಕೆ.ಟಿ. ನಾಯ್ಕ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೂಡಬಿದ್ರೆ ಅರಣ್ಯ ಇಲಾಖೆಯ ಎ.ಸಿ.ಎಫ್ ಶ್ರೀಧರ ಪಿ., ಉಡುಪಿ ಕರಾವಳಿ ಕಾವಲುಪಡೆ ಸಿ.ಪಿ.ಐ ಪ್ರಮೋದ್ ಕುಮಾರ್, ಮಂಗಳೂರು ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರು ಸತೀಶ ಬಟವಾಡಿ ಹಾಗೂ ಉಡುಪಿ ಆರ್.ಟಿ.ಒ. ಲಕ್ಷ್ಮೀನಾರಾಯಣ ಪಿ. ಇನ್ನಿತರರು ಭಾಗವಹಿಸಲಿದ್ದಾರೆ.

