Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ರಕ್ತವಾಂತಿ ಮಾಡಿ ವ್ಯಕ್ತಿ ಸಾವು

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ತಾಲೂಕಿನ ಉಳ್ತೂರು ಗ್ರಾಮದ ಕೆಳಬೆಟ್ಟು ನಿವಾಸಿ ರಘುರಾಮ (48) ಅವರು ರಕ್ತವಾಂತಿ ಮಾಡಿ ಮೃತಪಟ್ಟಿದ್ದಾರೆ.

ಅವರು ಕುಂದಾಪುರದ ಶೆಟ್ಟಿ ಐಸ್ ಪ್ಲಾಂಟ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ವಿಪರೀತ  ಮದ್ಯಪಾನದ ಚಟ ಹೊಂದಿದ್ದರು. ಫೆ.5ರಂದು ಬೆಳಿಗ್ಗೆ ಕೆಲಸದಲ್ಲಿರುವಾಗಲೇ ರಕ್ತವಾಂತಿ ಮಾಡಿಕೊಂಡಿದ್ದು, ಕೂಡಲೇ ಐಸ್‌ಪ್ಲಾಂಟ್‌ನ ಮಾಲೀಕ ರಂಜಿತ್‌ ಶೆಟ್ಟಿ ಮತ್ತು ಇತರರು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆತಂದಾಗ ಅಲ್ಲಿ ಪರೀಕ್ಷಿಸಿದ ವೈದ್ಯರು, ರಘುರಾಮ ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಕುಂದಾಪುರ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version