Site icon Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಅಕ್ಷಯ್ ಶೆಟ್ಟಿ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಇತ್ತೀಚೆಗೆ ನಡೆದ ಬೈಂದೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಯುವ ನಾಯಕ ಅಕ್ಷಯ್ ಶೆಟ್ಟಿ ಅವರು 2117 ಮತಗಳನ್ನು ಪಡೆದು ಬಹುಮತದೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್ ಸಿದ್ದಾಂತದ ಕುರಿತು ಅಪಾರ ಒಲವು ಮತ್ತು ಬದ್ಧತೆಯನ್ನು ಹೊಂದಿರುವ ಅಕ್ಷಯ್ ಶೆಟ್ಟಿಯವರು ಈ ಮೊದಲು ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷರಾಗಿ, ಮುಂದೆ ಕಾಂಗ್ರೆಸ್ ಸೇವಾದಳದ ಸೋಶಿಯಲ್ ‌ಮೀಡಿಯಾ ರಾಜ್ಯಾಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದರು.

ಕೃಷಿ ಕುಟುಂಬದ ಹಿನ್ನಲೆಯ ಇವರು ಬಿ.ಕಾಂ ಪದವೀಧರರಾಗಿದ್ದು, ಇದೀಗ ವೆಬ್ ಡೆವಲಪರ್ ವೃತ್ತಿ ನಡೆಸುತ್ತಿದ್ದಾರೆ.

Exit mobile version