ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಸುರ್ಗೆಡಿ ದೈವಸ್ಥಾನ ಗೆಂಡದ ಪ್ರಯುಕ್ತ ಶ್ರೀ ಕ್ಷೇತ್ರ ಹಾಲಾಡಿಯ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಮೇಳದ ಸ್ತ್ರೀ ವೇಷದಾರಿ ಬೀಜಮಕ್ಕಿ ವಿಜಯ ಗಾಣಿಗ ಅವರನ್ನು ಯಕ್ಷಗಾನದ ಕಲಾಭಿಮಾನಿಗಳ ಪರವಾಗಿ ಆಡಳಿತ ಮೋಕ್ತೆಸರರಾದ ಸತ್ಯನಾರಾಯಣ ಶೆಟ್ಟಿ ವಂಡ್ಸೆ ದೊಡ್ಡಮನೆ & ಮೇಳದ ಯಜಮಾನರಾದ ವೈ ಕರುಣಾಕರ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸುಧೀರ್ ಶೆಟ್ಟಿ ಹಂತಡಿ (ಮುಂಬೈ),ಕುಶಾಲ್ ಶೆಟ್ಟಿ ಕೊರ್ಗಿಮನೆ, ಪಾತ್ರಿ ಮಂಜಯ್ಯ ಶೆಟ್ಟಿ, ವಿ.ಕೆ. ಶಿವರಾಮ ಶೆಟ್ಟಿ, ಶಶಿಧರ್ ಶೆಟ್ಟಿ ಕೊರಾಡಿಮನೆ, ಸುಧಾಕರ ಶೆಟ್ಟಿ, ಗಿರೀಶ ಎನ್. ನಾಯ್ಕ್, ಗಣೇಶ್ ಭಂಡಾರಿ, ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಸಂತ ರಾಜ್ ಶೆಟ್ಟಿ ನಿರೂಪಿಸಿದರು.

