ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಟೀಮ್ ಸಚಿನ್ ಲವರ್ಸ್ ತಂಡದ ವತಿಯಿಂದ ಕಾವ್ರಾಡಿ ಮುಳ್ಳುಗುಡ್ಡೆಯಲ್ಲಿ ಮದಗ ಪ್ರೀಮಿಯರ್ ಲೀಗ್ ಸೀಸನ್ 4 ಕ್ರಿಕೆಟ್ ಪಂದ್ಯಾಟ ನಡೆಯಿತು.
ನಿವೃತ್ತ ಸೈನಿಕ ರವಿಚಂದ್ರ ಶೆಟ್ಟಿ ತೆಕ್ಕಟ್ಟೆ ಪಂದ್ಯಾಟವನ್ನು ಉದ್ಘಾಟಿಸಿದರು. ಸಚಿನ್ ಲವರ್ಸ್ ತಂಡದ ವತಿಯಿಂದ ಪ್ರಪ್ರಥಮ ಬಾರಿಗೆ ಮುದ್ರಿಸಿದ ಸಚಿನ್ ಲವರ್ಸ್ ಡೈರಿಯನ್ನು ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಬೀಜಾಡಿ ಬಿಡುಗಡೆಗೊಳಿಸಿ, ಶುಭ ಹಾರೈಸಿದರು.

ಮದಗ ಪ್ರೀಮಿಯರ್ ಲೀಗ್ ಸೀಜನ್ 4ರ ಸಂಘಟಕ ರಾಹುಲ್ ಹೆಗ್ಡೆ, ಕಾವ್ರಾಡಿ ಅಜಿತ್ ಕುಮಾರ್ ಶೆಟ್ಟಿ, ಗುರುಪ್ರಸಾದ್ ಶೆಟ್ಟಿ ನೈಲ್ಕೋಡ್, ಅನಿಲ್ ಕಾವ್ರಾಡಿ, ಹೇಮಂತ್ ಕಾವ್ರಾಡಿ, ಶ್ಯಾಮ್ ಗುಲ್ವಾಡಿ, ನಾಗರಾಜ್ ಮುಳ್ಳುಗುಡ್ಡೆ, ಅನಿಲ್ ಬಟರ್ಫ್ಲೈ, ಬೋಜ ಪೂಜಾರಿ, ಗುರುರಾಜ ಕಾವ್ರಾಡಿ, ಸ್ಥಳೀಯ ಮುಖಂಡರುಗಳಾದ ಪ್ರದೀಪ್ ಕುಮಾರ್ ಶೆಟ್ಟಿ, ಸುರೇಂದ್ರ ಶೆಟ್ಟಿ ಹಡಾಳಿ, ಎಂ.ಚಂದ್ರ, ಕ್ಯಾಂಪ್ಕೋ ಮ್ಯಾನೇಜರ್ ಶಿವಾನಂದ ಮಂಗಳೂರು ಉಪಸ್ಥಿತರಿದ್ದರು.
ಈ ಸಂದರ್ಭ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಶ್ರೀರಾಮೇಶ್ವರ ಯುವಕ ತಂಡದ ಸದಸ್ಯರನ್ನು ಗುರುತಿಸಿ ಸನ್ಮಾನಿಸಲಾಯಿತು. ಹಾಗೂ 2 ದಿನಗಳ ಕಾಲ ನಡೆದ 16 ತಂಡಗಳ ಕ್ರಿಕೆಟ್ ಪಂದ್ಯಾಟದಲ್ಲಿ ಗುರುಪ್ರಸಾದ್ ಶೆಟ್ಟಿ ಮಾಲಿಕತ್ವದ ಅಭಿರುಚಿ ಅವೆಂಜಸರ್ಸ್ ಪ್ರಥಮ ಸ್ಥಾನವನ್ನು ಹಾಗೂ ರಾಘವೇಂದ್ರ ಕೊಠಾರಿ ನೆಲ್ಲಿಕಟ್ಟೆ ಮಾಲಿಕತ್ವದ ಶ್ರೀ ಬ್ರಾಹ್ಮೀ ಫ್ರೆಂಡ್ಸ್ ದ್ವಿತೀಯ ಸ್ಥಾನವನ್ನು ಪಡೆಯಿತು.